
ಹುಬ್ಬಳ್ಳಿ : ಪ್ರೀತಿಗೆ ವಯಸ್ಸಿಲ್ಲ ಅಂತಾರೆ ಆದ್ರೆ ಇಲ್ಲೊಬ್ಬ 50 ವರ್ಷದ ವ್ಯಕ್ತಿ ತನ್ನ ಮಿತಿಮೀರಿದ ವಯಸ್ಸಿನಲ್ಲಿ ಮಾಡಬಾರದ ಕೆಲಸವನ್ನು ಮಾಡಿದ್ದಾನೆ. 18ರ ಯುವತಿಯನ್ನು 50 ವರ್ಷದ ವ್ಯಕ್ತಿ ಮದುವೆಯಾಗಿದ್ದಾನೆ.
ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ 50 ವರ್ಷದ ಪ್ರಕಾಶ್ 18 ವಯಸ್ಸಿನ ಕರೀಷ್ಮಾ ಎಂಬ ಯುವತಿಯನ್ನು ಆಕೆಯ ಪೋಷಕರ ಕಣ್ತಪ್ಪಿಸಿ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ.
ಹುಬ್ಬಳ್ಳಿಯಿಂದ ಮಹಾರಾಷ್ಟ್ರದಲ್ಲಿರುವ ತನ್ನ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ 18 ವರ್ಷದ ಯುವತಿ ಇದೀಗ 50 ವರ್ಷದ ಪ್ರಕಾಶ್ನೊಂದಿದೆ ಓಡಿಹೋಗಿ ಮದುವೆಯಾಗಿದ್ದಾಳೆ.
ಪ್ರಕಾಶ್ ಅಪ್ರಾಪ್ತ ಕರೀಷ್ಮಾ ಜೊತೆ 2 ವರ್ಷದ ಹಿಂದೆ ಪ್ರೀತಿ ಪ್ರೇಮ ಅಂತ ಸುತ್ತಾಡ್ತಾ ಇದ್ದ. ಮಗಳ ಪ್ರೇಮಪುರಾಣ ಕೇಳಿ ಹೌಹಾರಿದ್ದ ತಂದೆ-ತಾಯಿ ಮಗಳನ್ನು ತಮ್ಮ ಮನೆಯಿಂದ ಬಿಡಿಸಿ ಕೊಲ್ಲಾಪುರದಲ್ಲಿರುವ ಅಜ್ಜಿ ಮನೆಯಲ್ಲಿ ಬಿಟ್ಟಿದ್ರು. ಅಲ್ಲದೆ ಮಗಳಿಗೆ ಬುದ್ಧಿವಾದವನ್ನೂ ಹೇಳಿದ್ರು. ಇದ್ಯಾವುದಕ್ಕೂ ಸೊಪ್ಪು ಹಾಕದ ಕರೀಷ್ಮಾ ಅಂಕಲ್ ಬೇಕೇ ಬೇಕು ಅಂತ ಮನೆಮಂದಿಯ ಕಣ್ಣಿಗೆ ಮಣ್ಣೆರೆಚಿ ನಾಪತ್ತೆಯಾಗಿದ್ಳು. ಇತ್ತ ಮಗಳನ್ನು ಅಲ್ಲಿ ಇಲ್ಲಿ ಅಂತ ಬೀದಿ ಬೀದಿ ಹುಡುಕಾಡಿದ ಪೋಷಕರಿಗೆ ಆಶ್ಚರ್ಯ ಕಾದಿತ್ತು.
ಪ್ರಕಾಶ್ ಕರೀಷ್ಮಾಳನ್ನು ಮದುವೆಯಾಗಿರುವ ಫೋಟೋವನ್ನು ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದಾನೆ. ತಂದೆ-ತಾಯಿ ನಮ್ಮ ಮಗಳಿಗೆ ತಲೆ ಕೆಡಿಸಿದ್ದಾನೆ ಎಂದು ಪ್ರಕಾಶ್ ವಿರುದ್ಧ ಆರೋಪಿಸಿದ್ದಾರೆ.