Wednesday, March 26, 2025
ಉಡುಪಿಕುಂದಾಪುರಜಿಲ್ಲೆಸುದ್ದಿ

ವಿಚಿತ್ರ ರೋಗ ಬಾಧೆಯಿಂದ ನರಳುತ್ತಿರುವ ಪುತ್ರನ ಸ್ಥಿತಿ ನೆನೆದು ತಾಯಿಯ ಕಣ್ಣೀರ ರೋದನ;ಔಷಧಕ್ಕೋಸ್ಕರ ತಾಯಿ ಖರ್ಚು ಮಾಡಿ ಸೋತು ಸುಣ್ಣ-ಕಹಳೆ ನ್ಯೂಸ್

ಕುಂದಾಪುರ:ಮೈತುಂಬಾ ಗುಳ್ಳೆ,ಚರ್ಮ ಸುಟ್ಟು ಹೋದಂತಿದೆ.ವಿಪರೀತ ಯಾತನೆ.ವೈದ್ಯರು ದೇಹದಲ್ಲಿ ಹೆಚ್ಚಿರುವ ನಂಜಿನ ಕಾರಣಕ್ಕೆ ಹೀಗಾಗುತ್ತಿದೆ ಎಂದು ಹೇಳುತ್ತಾರೆ. ಆದರೆ ಇನ್ನೂ ಕಾಯಿಲೆ ಯಾವುದೆಂದು ಖಚಿತವಾಗಿಲ್ಲ, ಮನೆಗೆ ಆಧಾರವಾಗಿದ್ದ ಇವರೀಗ ಹಾಸಿಗೆ ಹಿಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಚಿತ್ರ ರೋಗ ಬಾಧೆಯಿಂದ ನರಳುತ್ತಿರುವ ಪುತ್ರನ ಸ್ಥಿತಿ ನೆನೆದು ತಾಯಿಯ ಕಣ್ಣೀರ ರೋದನ ಮುಗಿಲು ಮುಟ್ಟಿದೆ.ತಾಲ್ಲೂಕಿನ ತಲ್ಲೂರು ಗ್ರಾಮದ ಉಪ್ಪಿನಕುದ್ರುವಿನ ಕುಟುಂಬವೊಂದರ ದುರಂತ ಕಥಾನಕವಿದು.
ಉಪ್ಪಿನಕುದ್ರುವಿನ ನಿತ್ಯಾನಂದ (38)ಎಂಬವರು ಈ ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದಾರೆ,ಬಾಲ್ಯದ ದಿನಗಳಿಂದಲೂ ಶ್ರಮಜೀವಿ.ತಂದೆ ಪರಮೇಶ್ವರ, ತಾಯಿ ಕಮಲ ಸಹಿತ ಮೂವರು ಸಹೋದರರೊಂದಿಗೆ ಉಪ್ಪಿನಕುದ್ರು ಹಾಲು ಡೈರಿ ಸಮೀಪ ನೆಲೆಸಿದವರು.ಇಬ್ಬರು ಹಿರಿಯ ಸಹೋದರರು ಅನಾರೋಗ್ಯದಿಂದ ಬೆನ್ನು ಬೆನ್ನಿಗೆ ಗತಿಸಿದ ಬಳಿಕ ಮನೆಯ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಯಿ ಕಮಲ ಅವರ ಆರೈಕೆಯಲ್ಲಿ ನೆಮ್ಮದಿಯಿಂದಿದ್ದ ನಿತ್ಯಾನಂದ ಅವರಿಗೆ ವರ್ಷದ ಹಿಂದೆ ಮೈಯಲ್ಲಿ ಚಿಕ್ಕದಾದ ಗುಳ್ಳೆ ಎದ್ದಿತ್ತು.ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಪಡೆದ ಬಳಿಕ ಮತ್ತೆ ಗುಳ್ಳೆಗಳು ಕಾಣಿಸಿದವು.ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ತೆರಳಿದರು. ದೇಹದಲ್ಲಿ ನಂಜಿನ ಅಂಶ ಹೆಚ್ಚಿರುವ ಕಾರಣಕ್ಕೆ ದುಬಾರಿ ಮೊತ್ತದ ಔಷಧ ಬರೆದುಕೊಟ್ಟರು.ಅದು ಸೇವಿಸಿದ ಬಳಿಕ ಕೊಂಚ ಕಡಿಮೆಯಾದಂತೆ ಕಂಡುಬAತು.ಆದರೆ ಇದೀಗ ಮತ್ತೆ ದೇಹವನ್ನೇ ಆವರಿಸಿಕೊಂಡಿದೆ. ಕಟ್ಟುಮಸ್ತಾದ ಯವಕನ ಶರೀರ ನೋಡಲು ಭಯ ಆಗುತ್ತದೆ ಚರ್ಮ ಸುಟ್ಟುಹೋದಂತೆ ಆಗಿದೆ.ಹೊರಗಡೆ ಹೋಗಲಾಗುತ್ತಿಲ್ಲ,ಒಳಗಡೆ ಕೂರಲಾಗದ ಸಂಕಟದ ಸ್ಥಿತ, ಸುಂದರ ಕಾಯ ವಿಕಾರ ಆಗಿದೆ, ವಯೋವೃದೆ ತಾಯಿ ಪುತ್ತನ ಆರೈಕೆಯಲ್ಲಿ ಸೋತು ಸುಣ್ಣವಾಗಿದ್ದಾರೆ.

ಊಟಕ್ಕೂ ತತ್ತಾರ: ಪುಟ್ಟ ಗುಡಿಸಲಿನಲ್ಲಿ ನೆಲೆಸಿರುವ ತಾಯಿ, ಪುತ್ರನ ಸ್ಥಿತಿ ಘನಘೋರ ಅವರ ಸಂಕಷ್ಟ ಆ ದೇವರಿಗೆ ಮಾತ್ರ ಪ್ರೀತಿ.ದುಡಿಯುವ ಪುತ್ರ ಹಾಸಿಗೆ ಹಿಡಿದಿದ್ದರಿಂದ ಮನೆಯಲ್ಲಿ ಒಂದೊತ್ತಿನ ಊಟಕ್ಕೂ ತತ್ತಾರ,ಔಷಧಕ್ಕೋಸ್ಕರ ತಾಯಿ ಖರ್ಚು ಮಾಡಿ ಸೋತು ಸುಣ್ಣವಾಗಿದ್ದಾರೆ .ಪುತ್ರನನ್ನು ಉಳಿಸಿಕೊಡಿ ಎಂದು ಮನೆ ಬಾಗಿಲಿಗೆ ಬರುವರಲ್ಲಿ ಅಂಗಲಾಚುತ್ತಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ