Saturday, November 23, 2024
ಸುದ್ದಿ

ಮೈತ್ರಿ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ; ಸಿ ಟಿ ರವಿ ಆಕ್ರೋಶ – ಕಹಳೆ ನ್ಯೂಸ್

ಮಂಗಳೂರು: ಅವಹೇಳನ ಮಾಡಿ ಬೈಯುವವರಿಗೆ ಒಂದು ನೀತಿ. ಟಿಪ್ಪುವಿನ ವಾಸ್ತವಾಂಶ ತೋರಿಸಿದವರಿಗೆ ಇನ್ನೊಂದು ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಶಾಸಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಲ್ಲಿರೋ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯಲ್ಲಿ ಪತ್ರಕರ್ತನ ಬಂಧನವನ್ನು ತೀವ್ರವಾಗಿ ಖಂಡಿಸಿದರು. ಟಿಪ್ಪು ಕುರಿತ ಹೇಳಿಕೆ ನೀಡಿದ ಪತ್ರಕರ್ತನನ್ನು ಬಂಧಿಸಿದ ಸರ್ಕಾರ ಈ ಹಿಂದೆ ಹಿಂದೂ ಧರ್ಮವನ್ನು, ಹಿಂದೂ ದೇವರನ್ನು ಅವಹೇಳನ ಮಾಡಿದ ಭಗವಾನ್, ಮಹೇಶ್ಚಂದ್ರ, ಯೋಗೇಶ್ ಮಾಸ್ಟರ್, ಗಿರೀಶ್ ಕಾರ್ನಾಡ್‍ರನ್ನು ಯಾಕೆ ಬಂಧಿಸಿಲ್ಲ. ಈ ವಿಚಾರದಲ್ಲೇ ಸರ್ಕಾರದ ದ್ವಂದ ನೀತಿಯನ್ನು ಅನುಸರಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದರು. ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಯಾವ ರೀತಿಯಲ್ಲಿ ಸೀಮಿತವಾಗಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದರು. ಇನ್ನು ಕಾಂಗ್ರೆಸ್ ಸರಕಾರವಿದ್ದಾಗ ಎಸಿಬಿ ಬಳಸಿ ಭ್ರಷ್ಟರನ್ನು ಉಳಿವಿಗೆ ಪ್ರಯತ್ನಿಸುತ್ತಿದ್ದರು. ಈಗ ಸಮ್ಮಿಶ್ರ ಸರಕಾರ ಸಿಸಿಬಿ- ಸಿಒಡಿಗಳನ್ನು ಕೂಡಾ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು. ಅಂದು ಕಾಂಗ್ರೆಸ್‍ನ ಟಿ.ಬಿ ಜಯಚಂದ್ರ ಸಹಿತ ಕಾಂಗ್ರೆಸ್‍ನ ಹಲವು ಮುಖಂಡರು ನೋಟ್ ಬ್ಯಾನನ್ನು ಸ್ವಾಗತಿಸಿದ್ರು. ಆದರೆ ಇಂದು ಅದೇ ಕಾಂಗ್ರೆಸಿಗರು ಮೋದಿಯನ್ನು ಸುಡುವ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಜಾಹೀರಾತು

ಜಾಹೀರಾತು
ಜಾಹೀರಾತು