Tuesday, April 1, 2025
ಉಡುಪಿಜಿಲ್ಲೆಸುದ್ದಿ

ವಿಟ್ಲ ಮೇಗಿನ ಪೇಟೆ ಶಾಲೆಯಲ್ಲಿ ಅಕ್ಷಯ ಕಾಲೇಜಿನ ರಾ.ಸೇ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು:ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರವು ದ.ಕ ಜಿ.ಪಂ.ಹಿ.ಪ್ರಾ. ಶಾಲೆ ಮೇಗಿನಪೇಟೆ ವಿಟ್ಲ ಇಲ್ಲಿ ದಿನಾಂಕ 17-02-2024ರಂದು ಆರಂಭವಾಯಿತು.

ಈ ಕಾರ್ಯಕ್ರಮವನ್ನು ಶ್ರೀ ಕೃಷ್ಣಯ್ಯ ಕೆ ವಿಟ್ಲ ಅರಮನೆ ಇವರು ಉದ್ಘಾಟಿಸಿ ,ಶಿಬಿರದಲ್ಲಿನ ಪಾಲ್ಗೊಳ್ಳುವಿಕೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವುದಲ್ಲದೆ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡAತಹ ಶ್ರೀ ಜಯಂತ ನಡುಬೈಲು ಅಧ್ಯಕ್ಷರು ಅಕ್ಷಯ ಕಾಲೇಜು ಪುತ್ತೂರು ಅವರು ಮಾತನಾಡಿ ಎನ್‌ಎಸ್‌ಎಸ್ ನಂತಹ ಶಿಬಿರಗಳು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸಲು ಒಂದು ಉತ್ತಮ ವೇದಿಕೆಯಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ತಿಳಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಜಯಂತಿ ,ಶ್ರೀ ಸಂಪತ್ ಕೆ ಪಕ್ಕಳ ಪ್ರಾಂಶುಪಾಲರು ಅಕ್ಷಯ್ ಕಾಲೇಜು ಪುತ್ತೂರು , ಶ್ರೀ ರಾಜೇಶ್ ವಿಟ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಇವರು ಮಾತನಾಡಿ ಶುಭ ಹಾರೈಸಿದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ಕಿಶೋರ್‌ಕುಮಾರ್ ರೈ ಪ್ರಾಸ್ತವಿಕ ಮಾತುಗಳನ್ನಾಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕು.ಮೇಘಶ್ರೀ ಯೋಜನಾಧಿಕಾರಿ ಸ್ವಾಗತಿಸಿ, ಘಟಕ ನಾಯಕ ಅಖಿಲೇಶ್
ವಂದಿಸಿ, ಸ್ವಯಂ ಸೇವಕರಾದ ಕೀರ್ತನ್‌ಕೃಷ್ಣ ಪ್ರಾರ್ಥಿಸಿ , ವಿಂದುಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ ಆಡಳಿತಾಧಿಕಾರಿ ಅರ್ಪಿತ್. ಟಿ.ಎ ಘಟಕ ನಾಯಕ ರಾಕೇಶ್ ಹಾಗೂ ನಾಯಕಿ ಶ್ರುತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ