Saturday, March 29, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

2024ರ ಸಮ್ಮೇಳನ ಅಧ್ಯಕ್ಷರಾದ ಬನುವನೇಶ್ವರಿ ಹೆಗಡೆಯವರಿಗೆ ವಿಧ್ಯುಕ್ತವಾದ ಅಹ್ವಾನ-ಕಹಳೆ ನ್ಯೂಸ್

ಫೆ 21,22 ಮಂಗಳೂರು ವಿಶ್ವವಿದ್ಯಾನಿಲಯದ ಆವರಣ ಕೊಣಾಜೆಯಲ್ಲಿ ನಡೆಯುವ ಎರಡು ದಿನಗಳ ದಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನವನ್ನು ವಿಧ್ಯುಕ್ತವಾಗಿ ಹಿಂದಿನ ವರ್ಷದ ಮಂಗಳೂರಿನಲ್ಲಿ ನಡೆದ ಸಮ್ಮೇಳನ ಆಧ್ಯಕ್ಷರಾದ ಭುವನೇಶ್ವರಿ ಹೆಗಡೆಯವರಿಗೆ ಇಂದಿನ ಸಮ್ಮೇಳನ ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾಕ್ಟರೇಟ್‌ ಧನಂಜಯ ಕುಂಬ್ಳೆ ತಂಡವು ನೀಡಿತು.

ದಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಸಮ್ಮೇಳನ ಖಜಾಂಚಿ ಲಯನ್ ಚಂದ್ರಹಾಸ ಶೆಟ್ಟಿ ಕನ್ನಡದ ಶಾಲು ತೊಡಿಸಿ ಗೌರವ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಮತಿ ಭುವನೇಶ್ವರಿ ಹೆಗಡೆ ಅವರು ಕಳೆದ ಬಾರಿಯ ಸಮಯ ಪಾಲನೆಯ ಬಗ್ಗೆ ನೆನಪು ಮಾಡಿದರು. ಹಾಗೂ ಜನರು ಕಡಿಮೆ ಇದ್ದ ಬಗ್ಗೆ ಖೇದ ವ್ಯಕ್ತಪಡಿಸಿದರು ಮತ್ತು ಜನರು ಹೆಚ್ಚು ಬರಲು ಪ್ರಯತ್ನ ಮಾಡುವ ಬಗ್ಗೆ ವಿನಂತಿ ಮಾಡಿದರು
ಜಂಟಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕಲ್ಲಿಮಾರ್ ಸಂಯೋಜ‌ನ ಸಮಿತಿಯ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನೋಂದಣಿ ಸಮಿತಿಯ ಅಧ್ಯಕ್ಷರಾದ ಸುರೇಂದ್ರ ರೈ ಗ್ರಾಮಚಾವಡಿ ಸ್ವಾಗತಿಸಿದರು.
ಸಮ್ಮೇಳನದ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಮಂಗಳೂರು ಕಸಾಪ ಹೋಬಳಿ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ನಿರೂಪಿಸಿ‌ ವಂದಿಸಿದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ