ಫೆ.22 ರಂದು ಪುಳುವಾರು ಗ್ರಾಮ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ-ಕಹಳೆ ನ್ಯೂಸ್

ಪುತ್ತೂರು: ಫೆ.22 ರಂದು ದೊಂಪದ ಬಲಿ, ಗ್ರಾಮ ದೈವ ಶಿರಾಡಿ ಕಲ್ಕುಡ ಮತ್ತು ಪಿಲಿಭೂತ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿರುವುದು.
ಫೆ.22ರಂದು ಬೆಳಗ್ಗೆ 6.ಗಂಟೆಗೆ ಗಣಪತಿ ಹೋಮ ಮತ್ತು ಪರಿವಾರ ದೈವಗಳಿಗೆ ತಂಬಿಲ ನಂತರ 9.00ಗಂಟೆಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಹಾಗೆ ಸಂಜೆ 5.00 ಗಂಟೆಗೆ ಭಜನಾ ಕಾರ್ಯಕ್ರಮ (ಶ್ರೀ ಮಾಹಾವಿಷ್ಟು ಭಜನಾ ತಂಡದವರಿAದ) ಕುಣಿತ ಭಜನೆ, ಸಂಜೆ 6.ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ 7.ಕ್ಕೆ ಗೋಂದೋಳು ಪೂಜೆ, ರಾತ್ರಿ 8.30ರಿಂದ ಅನ್ನಸಂತರ್ಪಣೆ ಬಳಿಕ ರಾತ್ರಿ 9.30 ದೈವಗಳ ನೇಮೋತ್ಸವ ನಡೆಯಲಿರುವುದು.
ಮಾರನೆ ದಿನ ಫೆ.23ಕ್ಕೆ ಬೆಳಿಗ್ಗೆ 8.30ಕ್ಕೆ ಗುಳಿಗ ದೈವದ ನೇಮ ನಡೆಯಲಿರುವುದು.