Sunday, March 30, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸೋಮೇಶ್ವರ: ರಾಣಿಕೆರೆ ಅಭಿವೃದ್ಧಿಗೆ ಭೂಮಿಪೂಜೆ-ಕಹಳೆ ನ್ಯೂಸ್

ಉಳ್ಳಾಲ: ‘ಪ್ರತಿಯೊಂದು ಕ್ಷೇತ್ರದಲ್ಲಿರುವ ಐತಿಹಾಸಿಕ ಮತ್ತು ಪ್ರಮುಖ ಕೆರೆಗಳನ್ನು ಅಭಿವೃದ್ಧಿಪಡಿಸಿ ಜಲಮೂಲ ಸಂರಕ್ಷಿಸಲು ಸರ್ಕಾರ ಆದ್ಯತೆ ನೀಡುತ್ತಿದೆ. ಸೋಮೇಶ್ವರದ ರಾಣಿ ಕೆರೆ ಅಭಿವೃದ್ಧಿಗಾಗಿ ಮೂಡದಿಂದ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಸೋಮೇಶ್ವರದ ಸೋಮನಾಥ ದೇವಸ್ಥಾನದ ಸಮೀಪದ ರಾಣಿ ಅಬ್ಬಕ್ಕಳ ಜಳಕದ ಕೆರೆ ‘ರಾಣಿಕೆರೆ’ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಅಧಿಕಾರ ಎನ್ನುವುದು ತಾತ್ಕಾಲಿಕ, ಅಧಿಕಾರ ಸಿಕ್ಕ ಸಂದರ್ಭ ಶಾಶ್ವತ ಕೆಲಸ ಮಾಡಿದಾಗ ಜನಸಾಮಾನ್ಯರ ಮನದಲ್ಲಿ ನಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಸೋಮನಾಥ ದೇವಸ್ಥಾನದ ಆಸುಪಾಸಿನ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲಾಗಿದೆ. ಗದಾತೀರ್ಥ ಕೆರೆಯನ್ನು ಎರಡು ಬಾರಿ ಅಭಿವೃದ್ಧಿಪಡಿಸಲಾಗಿದೆ. ಪವಿತ್ರ ಸ್ಥಳಗಳ ಪಾವಿತ್ರ್ಯತೆ ಉಳಿಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಮನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ ಮಾತನಾಡಿ, ‘ರಾಣಿ ಅಬ್ಬಕ್ಕ ಸ್ನಾನ ಮಾಡುತ್ತಿದ್ದ ಕೆರೆ ಇದಾಗಿದ್ದು ಕೆರೆಯನ್ನು ಅಭಿವೃದ್ಧಿಪಡಿಸುವ ಹಲವು ವರ್ಷಗಳ ಕನಸು ನನಸಾಗುತ್ತಿದೆ’ ಎಂದರು.

ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ, ಕಮಿಷನರ್ ನೂರ್ ಜಹಾರ ಖಾನಮ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ್, ವ್ಯವಸ್ಥಾಪನಾ ಸಮಿತಿ ಸದಸ್ಯ ದೀಪಕ್ ಪಿಲಾರ್, ಸದಾನಂದ ಬಂಗೇರ, ಮುಖಂಡ ಪ್ರೇಮನಾಥ್, ಕೌನ್ಸಿಲರ್ ಪುರುಷೋತ್ತಮ್ ಶೆಟ್ಟಿ, ಶ್ರೀಧರ್ ಉಳ್ಳಾಲ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಚಂದ್ರಿಕಾ ರೈ ಇದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ