Tuesday, April 8, 2025
ಕಾರ್ಕಳಜಿಲ್ಲೆ

ಮಾ.15ರಂದು ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ- ಕಹಳೆ ನ್ಯೂಸ್

ಕಾರ್ಕಳ: ಮುಂದೂಡಲ್ಪಟ್ಟಿದ್ದ ಮಿಯ್ಯಾರು ಲವ-ಕುಶ ಕಂಬಳ ಮಾ.15ರಂದು ನಡೆಯಲಿದೆ. ಜಿಲ್ಲಾ ಕಂಬಳ ಸಮಿತಿ ವೇಳಾಪಟ್ಟಿಯಂತೆ ಜ.4ರಂದು ನಡೆಯಬೇಕಿದ್ದ ಈ ಕಂಬಳವು ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಮುಂದೂಡಲ್ಪಟ್ಟಿತ್ತು. ಈಗ ಮಾ.15ರಂದು ನಡೆಯಬೇಕಿದ್ದ ಬಂಗಾಡಿ ಕಂಬಳ ಕಾರಣಾಂತರಗಳಿಂದ ರದ್ದಾಗಿದೆ.

ಕಂಬಳದ ರೂಪುರೇಷೆಗಳ ಬಗ್ಗೆ ಫೆ.21ರಂದು ನಡೆಸಿ ನಿರ್ಧರಿಸಲಾಗುವುದು ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿಸ್ವಚ್ಛ ಕರೆ, ಪ್ರೇಕ್ಷಕರಿಗೆ ಪೆವಿಲಿಯನ್‌, ಕೋಣಗಳ ವಿಶ್ರಾಂತಿಗೆ ವಿಶಾಲ ಪ್ರದೇಶ, ನಿರಂತರ ನೀರು ಪೂರೈಕೆ ಸಹಿತ ಮೊದಲಾದ ಸೌಕರ್ಯಗಳಿವೆ. ತರಬೇತಿಯಲ್ಲಿ ಸೆನ್ಸಾರ್‌ ಟೈಮರ್‌ ವ್ಯವಸ್ಥೆಯೂ ಇರುವುದರಿಂದ ಕೋಣಗಳ ಓಟದ ನಿಖರ ಮಾಹಿತಿ ಯಜಮಾನರಿಗೆ ತಿಳಿಯುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಿ ಇಲ್ಲಿ ಕೋಣಗಳ ತರಬೇತಿ (ಕುದಿ ಕಂಬಳ) ನಡೆಯುತ್ತದೆ. ಪ್ರತಿವರ್ಷ ಆಗಸ್ಟ್‌ನಲ್ಲಿ ಜೂನಿಯರ್‌ ಕೋಣಗಳ ತರಬೇತಿ ಆರಂಭವಾದರೆ, ಆಗಸ್ಟ್‌ ಕೊನೆ – ಸೆಪ್ಟಂಬರ್‌ ಮೊದಲ ವಾರದಿಂದ ಸೀನಿಯರ್‌ ಕೋಣಗಳ ತರಬೇತಿ ಆರಂಭವಾಗುತ್ತದೆ. ವಾರಾಂತ್ಯದಲ್ಲಿ 40ಕ್ಕೂ ಅಧಿಕ ಜೋಡಿ ಕೋಣಗಳು ಮಿಯ್ಯಾರಿನಲ್ಲಿ ತರಬೇತಿ ಪಡೆಯುತ್ತವೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ