ಪಡುಬಿದ್ರಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಘಟಕ ಉದ್ಘಾಟನೆ | ಎರಡು ಲಕ್ಷ ದೇಣಿಗೆ, ಕಲಾವಿದರಿಗೆ ಗೌರವಾರ್ಪಣೆ .
ಉಡುಪಿ : ದೇಶ ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸುತ್ತಾ ಅಶಕ್ತ ಕಲಾವಿದ ಪಾಲಿನ ಕಲ್ಪವೃಕ್ಷವಾಗಿರು ಯಕ್ಷಧ್ರುವ ಪಟ್ಲ ಫೌಂಡೇಷನ್ ಘಟಕವು ಪಡುಬಿದ್ರಿಯಲ್ಲಿ ಶನಿವಾರ ಉದ್ಘಾಟನೆಗೊಂಡಿತು. ಉದ್ಘಾಟನಾ ಕಾರ್ಯಕ್ರದ ಸಭಾಧ್ಯಕ್ಷತೆಯನ್ನು ಬಂಜಾರಾ ಪ್ರಕಾಶ್ ಶೆಟ್ಟಿ ವಹಿಸಿದ್ದರು.
ಶಾಸಕ ವಿನಯಕುಮಾರ್ ಸೊರಕೆ ಯಕ್ಷಧ್ರುವ ಪಟ್ಲ ಫೌಂಡೇಷನ್ನಿನ ಪಡುಬಿದ್ರಿ ಘಟಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಾದಿರಾಜ ಉಪಾಧ್ಯಯ ಕೊಲಕಾಡಿ, ಸಾಯಿರಾದಾ ಮನೋಹರ ಶೆಟ್ಟಿ , ಗುರ್ಮೆ ಸುರೇಶ್ ಶೆಟ್ಟಿ , ರತ್ನಾಕರ್ ರಾಜ್ ಅರಸು, ಎರ್ಮಾಳು ಸೀತಾರಾಮ ಶೆಟ್ಟಿ , ಕೃಷ್ಣ ಶೆಟ್ಟಿ ಭಾಗವಹಿಸಿದ್ದರು.
ಕೊರ್ನಾಯ ಶ್ರೀಪತಿ ರಾವ್, ವಿಷ್ಣುಮೂರ್ತಿ ಆಚಾರ್ಯ, ಪ್ರಶಾಂತ ಶೆಣ್ಯೆ, ಯಕ್ಷಧ್ರುವ ಫೌಂಡೇಷನ್ನಿನ ಸ್ಥಾಪಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಭಾಕರ ಭಂಡಾರಿ , ಸಿ.ಎ. ಸುದೇಶ್ ರೈ , ದುರ್ಗಾಪ್ರಕಾಶ್ ಪಿ.ವಿ ಈರೊಡ್, ಪ್ರೇಮನಾಥ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಡುಬಿದ್ರಿ ಫಟಕದ ವತಿಯಿಂದ ಎರಡು ಲಕ್ಷ ರೂ. ದೇಣಿಗೆಯನ್ನು ಕೇಂದ್ರ ಘಟಕಕ್ಕೆ ಇದೇ ಸಂದರ್ಭದಲ್ಲಿ ನೀಡಲಾಯಿತು. ಅಶಕ್ತ ಕಲಾವಿದರಾದ ಕುಟ್ಟಿ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಕಲಾವಿದರಾದ ನಾಗರಾಜ ಭಟ್, ದೇವರಾಜ ರಾವ್, ದಿ.ಜಗದೀಶ್ ಅರ್ಚಾಯ ಸ್ಮರಣಾರ್ಥ ಹೆಂಡತಿಗೆ ಗೌರವಾರ್ಪಣೆ ಮಾಡಲಾಯಿತು. ನಂತರ ಯಕ್ಷಗಾನ ಬಯಲಾಟ ಹಿರಣ್ಯಮಣಿ ಕಲ್ಯಾಣ ಪ್ರೇಕ್ಷರನ್ನು ಹುಬ್ಬೇರಿಸಿ ನೋಡುವಂತೆ ಮಾಡಿತು.
ನೂತನ ಪಡುಬಿದ್ರಿ ಘಟಕ :
ಅಧ್ಯಕ್ಷರು : ಜಯ ಎಸ್ ಶೆಟ್ಟಿ
ಕಾರ್ಯದರ್ಶಿ : ಪ್ರಕಾಶ್ ರಾವ್ ಪಿ.ಎನ್
ಕೋಶಾಧಿಕಾರಿ : ಶೈಲೇಂದ್ರ ಉಪಾಧ್ಯಯ