Recent Posts

Sunday, January 19, 2025
ಸುದ್ದಿ

ಉಪ್ಪಿನಂಗಡಿಯಲ್ಲಿ ಅಲೆಮಾರಿ ಜನಾಂಗದ ಮೂರು ಕಳ್ಳರ ಬಂಧನ – ಕಹಳೆ ನ್ಯೂಸ್

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅಲೆದಾಡುತ್ತಿದ್ದ ಅಲೆಮಾರಿ ಜನಾಂಗದ ಮೂರು ಕಳ್ಳಿಯರನ್ನು ಉಪ್ಪಿನಂಗಡಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಗದಗ ಮೂಲದ ಮೂರು ಯುವತಿಯರನ್ನು ಬಂಧಿಸಿ 4,39,680 ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇಲ್ಲಿನ ದೇವಸ್ಥಾನದ ವಠಾರದಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿದ 3 ಜನ ಹೆಂಗಸರು ಚಿಕ್ಕಮಕ್ಕಳೊಂದಿಗೆ ಕೈಯಲ್ಲಿ ಬ್ಯಾಗ್‌ಗಳನ್ನು ಹಿಡಿದುಕೊಂಡು ಸಂಶಯಿತರಾಗಿ ಸುತ್ತಾಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಗಲೇ ಓಡಲು ಯತ್ನಿಸಿದ ಕಳ್ಳಿಯರನ್ನು ಮೊಲೀಸರು ಯಶಸ್ವಿಯಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಮ್ಮ, ನಾಗಮ್ಮ, ಗೀತಾ ಎಮದು ಶಂಕಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂರು ಯುವತಿಯರನ್ನು ವಶಕ್ಕೆ ಪಡೆದಿದ್ದು ಅವರಲ್ಲಿದ್ದ ಬ್ಯಾಗ್‌ನ್ನು ಪರಿಶೀಲನೆ ನಡೆಸಿದಾಗ ಸುಮಾರು 4,31,680 ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದು, ಆರೋಪಿಗಳನ್ನು ನ್ಯಾಯಂಗ ಬಂಧನದಲ್ಲಿರಿಸಿದ್ದಾರೆ.

ಪುತ್ತೂರು ತಾಲೂಕು ಉಪ್ಪಿನಂಗಡಿ ಕಸಬಾ ಗ್ರಾಮದ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರಕ್ಕೆ ತೆರಳಿ ಮೂರು ಜನ ಮಹಿಳೆಯರನ್ನು ವಶಕ್ಕೆ ಪಡೆದು, ಪಂಚರುಗಳೊಂದಿಗೆ ಅವರಲ್ಲಿದ್ದ ಬ್ಯಾಗ್‌ಗಳನ್ನು ಪರಿಶೀಲಿಸಲಾಗಿ, ಬ್ಯಾಗ್‌ಗಳಲ್ಲಿ ಬಟ್ಟೆ ಬರೆಗಳಿದ್ದು, ಬಟ್ಟೆ ಬರೆಗಳ ಜೊತೆ ಚಿನ್ನಾಭರಣಗಳ ಕಟ್ಟು ಹಾಗೂ ಮೊಬೈಲ್‌ಗಳಿದ್ದು, ಈ ಚಿನ್ನಾಭರಣಗಳು ಹಾಗೂ ಮೊಬೈಲ್ ಗಳ ಬಗ್ಗೆ ಸದ್ರಿ ಮೂವರು ಮಹಿಳೆಯರಲ್ಲಿ ವಿಚಾರಿಸಲಾಗಿ, ಅವರ ವಶದಲ್ಲಿದ್ದ ಚಿನ್ನಾಭರಣಗಳು ಹಾಗೂ ಸೊತ್ತುಗಳ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರವಾಗಲೀ, ದಾಖಲಾತಿಗಳಾಲೀ ಇಲ್ಲದೇ ಇದ್ದುದ್ದರಿಂದ 1] ದೇವಮ್ಮ, ಶಿರಹಟ್ಟಿ ತಾಲೂಕು. ಗದಗ ಜಿಲ್ಲೆ 2] ಕು| ನಾಗಮ್ಮ@ ರೂಪಾ, ಶಿರಹಟ್ಟಿ ತಾಲೂಕು.ಗದಗ ಜಿಲ್ಲೆ ಹಾಗೂ 3] ಶ್ರೀಮತಿ ಗೀತಾ, ಶಿರಹಟ್ಟಿ ತಾಲೂಕು, ಗದಗ ಜಿಲ್ಲೆ ಎಂಬವರನ್ನು ದಸ್ತಗಿರಿ ಮಾಡಲಾಗಿದೆ.

ಮನೆಗೆಲಸದ ನೆಪದಲ್ಲಿ ಮನೆಗೆ ನುಸುಳಿ ಚಿನ್ನಾಭರಣ ದೋಚುತ್ತಿದ್ದ ಕಳ್ಳಿಯರನ್ನು ಬಂಧಿಸಿ 156 ಗ್ರಾಮ್ ತೂಕದ ಚಿನ್ನಾಭರಣ ವಶ.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿದ 03 ಜನ ಹೆಂಗಸರು ಚಿಕ್ಕಮಕ್ಕಳೊಂದಿಗೆ ಕೈಯಲ್ಲಿ ಬ್ಯಾಗ್ ಗಳನ್ನು ಹಿಡಿದುಕೊಂಡು ಸಂಶಯಿತರಾಗಿ ಸುತ್ತಾಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್‌ಐ ನಂದಕುಮಾರ್ ಹಾಗೂ ಸಿಬ್ಬಂಧಿಗಳು, ಪುತ್ತೂರು ತಾಲೂಕು ಉಪ್ಪಿನಂಗಡಿ ಕಸಬಾ ಗ್ರಾಮದ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರಕ್ಕೆ ತೆರಳಿ ಮೂರು ಜನ ಮಹಿಳೆಯರನ್ನು ವಶಕ್ಕೆ ಪಡೆದು, ಪಂಚರುಗಳೊಂದಿಗೆ ಅವರಲ್ಲಿದ್ದ ಬ್ಯಾಗ್‌ಗಳನ್ನು ಪರಿಶೀಲಿಸಲಾಗಿ, ಬ್ಯಾಗ್‌ಗಳಲ್ಲಿ ಬಟ್ಟೆ ಬರೆಗಳಿದ್ದು, ಬಟ್ಟೆ ಬರೆಗಳ ಜೊತೆ ಚಿನ್ನಾಭರಣಗಳ ಕಟ್ಟು ಹಾಗೂ ಮೊಬೈಲ್‌ಗಳಿದ್ದು, ಈ ಚಿನ್ನಾಭರಣಗಳು ಹಾಗೂ ಮೊಬೈಲ್ ಗಳ ಬಗ್ಗೆ ಸದ್ರಿ ಮೂವರು ಮಹಿಳೆಯರಲ್ಲಿ ವಿಚಾರಿಸಲಾಗಿ, ಅವರ ವಶದಲ್ಲಿದ್ದ ಚಿನ್ನಾಭರಣಗಳು ಹಾಗೂ ಸೊತ್ತುಗಳ ಬಗ್ಗೆ ಯಾವುದೇ ಸಮರ್ಪಕವಾದ ಉತ್ತರವಾಗಲೀ, ದಾಖಲಾತಿಗಳಾಲೀ ಇಲ್ಲದೇ ಇದ್ದುದ್ದರಿಂದ ೧] ದೇವಮ್ಮ, ಶಿರಹಟ್ಟಿ ತಾಲೂಕು. ಗದಗ ಜಿಲ್ಲೆ 2] ಕು| ನಾಗಮ್ಮ@ ರೂಪಾ, ಶಿರಹಟ್ಟಿ ತಾಲೂಕು.ಗದಗ ಜಿಲ್ಲೆ ಹಾಗೂ 3] ಶ್ರೀಮತಿ ಗೀತಾ, ಶಿರಹಟ್ಟಿ ತಾಲೂಕು, ಗದಗ ಜಿಲ್ಲೆ ಎಂಬವರನ್ನು ದಸ್ತಗಿರಿ ಮಾಡಲಾಗಿದೆ.

ಇವುಗಳ ಒಟ್ಟು ಅಂದಾಜು ಮೌಲ್ಯ ರೂ:4,31,680.00 ಆಗಬಹುದು ಹಾಗೂ 02 ಮೊಬೈಲ್‌ಗಳ ಅಂದಾಜು ಮೌಲ್ಯ 8000/- ರೂ ಆಗಬಹುದು, ಚಿನ್ನಾಭರಣ ಮತ್ತು ಸೊತ್ತುಗಳ ಒಟ್ಟು ಮೌಲ್ಯ ರೂ:4,39,680.00 ರೂ ಆಗಬಹುದು) ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.