Wednesday, March 26, 2025
ಜಿಲ್ಲೆಮೈಸೂರುಸುದ್ದಿ

ಮೈಸೂರು: ಉದಯಗಿರಿ ಗಲಭೆ ಪ್ರಕರಣ: ಮೌಲ್ವಿ ಬಂಧನ-ಕಹಳೆ ನ್ಯೂಸ್

ಮೈಸೂರು: ಉದಯಗಿರಿ ಪೊಲೀಸ್‌ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣದ ಸಂಬಂಧ ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿ ಮುಫ್ತಿ ಮುಷ್ತಾಕ್‌ ಮಫ್ ಅಲಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ಮೈಸೂರಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯ ಮೌಲ್ವಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಫೆ. 10ರಂದು ರಾತ್ರಿ ಅವಹೇಳನಕಾರಿ ಪೋಸ್ಟರ್‌ನಿಂದ ಉದ್ರಿಕ್ತಗೊಂಡ ಗುಂಪು ಉದಯಗಿರಿ ಠಾಣೆಯಲ್ಲಿ ಜಮಾವಣೆಗೊಂಡಿತ್ತು. ಸ್ಥಳದಲ್ಲಿ ಮೌಲ್ವಿ ಗುಂಪನ್ನು ಉದ್ದೇಶಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದರಿಂದ ಕೆರಳಿದ್ದ ಗುಂಪು ಪೊಲೀಸರು, ಠಾಣೆ ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿತ್ತು. ಎಸಿಪಿ ಸೇರಿ 14 ಪೊಲೀಸರಿಗೆ ಗಾಯವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ