ಮಹಿಳಾ ಸಬಲೀಕರಣಕ್ಕೆ ನಾರಾಯಣಗುರುಗಳ ಕೊಡುಗೆ ಅವಿಸ್ಮರಣೀಯ : ಪ್ರೇಮನಾಥ್ ಕರ್ಕೇರ -ಕಹಳೆ ನ್ಯೂಸ್

ಬಂಟ್ವಾಳ : ನಾರಾಯಣಗುರುಗಳ ತತ್ತ್ವಗಳು ಮತ್ತು ಚಟುವಟಿಕೆಗಳು ಮಹಿಳೆಯರ ಸ್ವಾತಂತ್ರ್ಯ, ಶಿಕ್ಷಣ, ಮತ್ತು ಸಾಮಾಜಿಕ ಸಮಾನತೆಗಾಗಿ ಗಂಭೀರವಾದ ಪ್ರೇರಣೆ ಒದಗಿಸಿವೆ. ಮಹಿಳೆಯರು ಶಿಕ್ಷಣ ಪಡೆದು ಸ್ವಾವಲಂಬಿಯಾಗಿ ಬದುಕಬೇಕು ಅಂದಿನ ಕಾಲದಲ್ಲಿ ಮಹಿಳಾ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡಲಾಗುತ್ತಿತ್ತು, ಆದರೆ ಗುರುಗಳು ಇದನ್ನು ಮುರಿಯಲು ಸಹಾಯ ಮಾಡಿದರು.
ಆದ್ದರಿಂದ ಮಹಿಳಾ ಸಬಲೀಕರಣಕ್ಕೆ ನಾರಾಯಣಗುರುಗಳ ಕೊಡುಗೆ ಅವಿಸ್ಮರಣೀಯ ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ ತಿಳಿಸಿದರು.
ಅವರು ಬಂಟ್ವಾಳ ಯುವವಾಹಿನಿ ಘಟಕದ ಸದಸ್ಯರಾದ ಸೂರಜ್ ತುಂಬೆ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 34 ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ,ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಅರುಣ್ ಕುಮಾರ್, ಶಿವಾನಂದ ಎಂ, ಸದಸ್ಯರಾದ ಪ್ರಶಾಂತ್ ಏರಮಲೆ, ಅಮಿತ ಉಮೇಶ್ , ಯತೀಶ್ ಬೊಳ್ಳಾಯಿ, ಸುದೀಪ್ ಸಾಲ್ಯಾನ್ ರಾಯಿ, ನಾಗೇಶ್ ಏಲಬೆ,ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.