Thursday, September 19, 2024
ಸುದ್ದಿ

ಅಸಹಾಯಕ ಸ್ಥಿತಿಯಲ್ಲಿದ್ದ ಯುವಕರ ರಕ್ಷಣೆ ಮಾಡಿದ ಸಾಮಾಜಿಕ ಕಾರ್ಯಕರ್ತರು – ಕಹಳೆ ನ್ಯೂಸ್

ಉಡುಪಿ: ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕರಿಬ್ಬರನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ್ದಾರೆ. ನಗರದ ಅಂಗಡಿಗಳ ಜಗಲಿಯಲ್ಲಿ ಸೊಂಟದ ಸ್ವಾಧೀನ ಕಳೆದುಕೊಂಡು ಮಲಗಿದ್ದಲ್ಲೇ ಶೌಚಾದಿಗಳನ್ನು ಮಾಡಿಕೊಂಡು, ಸರಿಯಾದ ಅನ್ನಆಹಾರ ಇಲ್ಲದೆ, ನಿತ್ರಾಣದಿಂದ ನರಳಾಟದ ಸ್ಥಿತಿಯಲ್ಲಿದ್ದ ಯುವಕನನ್ನು ಕೃಷ್ಣಮಠದ ಬಳಿಯಿರುವ ಯಾತ್ರಿ ನಿವಾಸದಲ್ಲಿ ಸ್ನಾನಮಾಡಿಸಿ, ಬೆಳೆದು ನಿಂತ ಗಡ್ಡಬೊಳಿಸಿ ಶುಚಿಗೊಳಿಸಿ, ಆತನಿಗೆ ಹೊಸಬಟ್ಟೆ ತೊಡಿಸಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಯುವಕನ್ನು 28 ವರ್ಷದ ನಕುಲ ಎಂದು ಗುರುತಿಸಲಾಗಿದ್ದು ಈತನನ್ನು ಲಾರಿ ಚಾಲಕನೊಬ್ಬ ಹಾವೇರಿ ಜಿಲ್ಲೆಯಿಂದ ಉಡುಪಿಯಲ್ಲಿ ತಂದುಬಿಟ್ಟು ಹೋಗಿರುವುದು ತಿಳಿದು ಬಂದಿದೆ, ಇನ್ನೊಂದೆಡೆ ಮನೋರೋಗಿ ಯುವಕನನ್ನು ಸಾಮಾಜಿಕ ಕಾರ್ಯಕರ್ತ ವಿಶುಶೆಟ್ಟಿ ಅಂಬಲಪಾಡಿಯವರು ಕೇರಳದ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಣಿಪಾಲದ ರಸ್ತೆಯಲ್ಲಿ ಈ ಮಾನಸಿಕ ಮುಸ್ಲೀಂ ಯುವಕನ ಮೇಲೆ ರಾತ್ರಿ ವೇಳೆ ಕಳ್ಳನೆಂದು ಭಾವಿಸಿ ಹಲ್ಲೆ ಮಾಡಲಾಗಿತ್ತು. ಈತನನ್ನು ಬಾಳಿಗ ಮಾನಸಿಕ ಆಸ್ಪತ್ರೆಗೆ ದಾಖಲುಪಡಿಸಿ ಚಿಕಿತ್ಸೆ ನೀಡಲಾಗಿತ್ತು ಆ ವೇಳೆ ಯುವಕನನ್ನು 22 ವರ್ಷದ ಪಿರೋಜ್ ಒಡಿಸ್ಸಾದವನೆಂದು ಗುರುತಿಸಲಾಗಿದೆ.

ಜಾಹೀರಾತು

ಇದೀಗ ಈ ಯುವಕನಿಗೆ ಉಡುಪಿ ಜಿಲ್ಲೆಯಲ್ಲಿ ಪುನರ್ವಸತಿ ಸಿಗದ ಕಾರಣ ಕೇರಳದ ಮಂಜೆಶ್ವರದ ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ. ಈ ಇಬ್ಬರು ಯುವಕರ ರಕ್ಷಣಾಕಾರ್ಯಕ್ಕೆ ಸಾಮಾಜಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.