ಹಳಿ ದಾಟುತ್ತಿದ್ದ ಕಾಡಾನೆಗಳ ಹಿಂಡಿಗೆ ಪ್ಯಾಸೆಂಜರ್ ರೈಲೊಂದು ಡಿಕ್ಕಿ;ಆರು ಕಾಡಾನೆಗಳುಸ್ಥಳದಲ್ಲೇ ಸಾವು-ಕಹಳೆ ನ್ಯೂಸ್

ಶ್ರೀಲಂಕಾ : ವನ್ಯಜೀವಿ ಅಭಯಾರಣ್ಯದ ಬಳಿ ಹಳಿ ದಾಟುತ್ತಿದ್ದ ಕಾಡಾನೆಗಳ ಹಿಂಡಿಗೆ ಪ್ಯಾಸೆಂಜರ್ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಆರು ಕಾಡಾನೆಗಳು ಸಾ*ವನ್ನಪ್ಪಿರುವ ಘಟನೆ ಶ್ರೀಲಂಕಾದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಧಾನಿ ಕೊಲಂಬೊದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಮಿನ್ನೇರಿಯಾ ಬಳಿ ಇರುವ ವನ್ಯಜೀವಿ ಅಭಯಾರಣ್ಯದಿಂದ ಹೊರಬಂದ ಆನೆಗಳ ಹಿಂದಿಗೆ ರೈಲು ಡಿಕ್ಕಿ ಹೊಡೆದಿದೆ ಈ ದುರ್ಘಟನೆಯಲ್ಲಿ ನಾಲ್ಕು ಆನೆ ಮರಿಗಳು ಸೇರಿದಂತೆ ಒಟ್ಟು ಆರು ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ ಎಂದು ಹೇಳಲಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಈ ಪ್ರದೇಶವು ಉದ್ಯಾನವನ ಮತ್ತು ವನ್ಯಜೀವಿಗಳಿಗೆ ಹೆಸರುವಾಸಿಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾಡು ಪ್ರಾಣಿಗಳು ಈ ಪ್ರದೇಶದಲ್ಲಿ ಅಡ್ಡಾಡುತ್ತಿರುತ್ತವೆ ಎಂದು ಹೇಳಲಾಗಿದೆ.
ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಬಳಿಕ ರೈಲಿನ ಇಂಜಿನ್ ಹಳಿ ತಪ್ಪಿದ್ದು ಆದರೆ ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.