Recent Posts

Sunday, January 19, 2025
ಸುದ್ದಿ

ಬಿಜೆಪಿ ಮಾಸ್ಟರ್ ಮೈಂಡ್ ಅಮಿತ್ ಶಾ ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಪಕ್ಷ ಬಲವರ್ಧನ ಚರ್ಚೆ – ಕಹಳೆ ನ್ಯೂಸ್

ಮಂಗಳೂರು: ಬಿಜೆಪಿ ಮಾಸ್ಟರ್ ಮೈಂಡ್ ಮಂಗಳೂರಿಗೆ ಆಗಮಿಸಿದ್ದು ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಅಮಿತ್ ಶಾ ಇವೆಲ್ಲ ಬಗೆಗೆ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.

ರಾಜ್ಯ ಮಾತ್ರವಲ್ಲದೆ, ದೇಶದೆಲ್ಲಡೆ ಈ ಬೈಠಕ್ ವಿಶೇಷವಾಗಿದ್ದು 2019ರ ಚುನಾವಣೆಗೆ ದಕ್ಷಿಣ ಭಾರತದಲ್ಲಿ ಕಮಲ ಪಕ್ಷವನ್ನು ಬಲವರ್ಧನೆ ಮಾಡುವುದರ ಬಗ್ಗೆ ಚರ್ಚೆಗಳು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಭಾರತದಲ್ಲಿ ಅಂದ್ರೆ ಪ್ರಮುಖವಾಗಿ ಕೇರಳದಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಶಬರಿಮಲೆ ವಿಚಾರವನ್ನು ಗಟ್ಟಿಯಾಗಿ ಹಿಡಿಕೊಂಡರೆ ಪಕ್ಷಚರ್ಧನೆ ಸಾಧ್ಯ ಎಂಬ ಮಾತುಗಳು ಕೇಳಿಬಂದವು. ಹಾಗೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಗ್ಗೆ ಚರ್ಚೆಗಳು ನಡೆದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಭಯ್ಯಾಜಿ ಜೋಶಿ ಪಾಲ್ಗೊಂಡಿದ್ದು ಪಕ್ಷ ಬಲವರ್ಧನೆಗೆ ಶಬರಿಮಲೆ ವಿಷಯ ಇನ್‌ಕ್ಯಾಚ್ ಮಾಡಬೇಕು ಎಂದು ಅಮಿತ್‌ಶಾಗೆ ಖಡಕ್ ಸೂಚನೆ ನೀಡಿದ್ರು. ತಡರಾತ್ರಿಯಿಂದ ನಾಲ್ಕು ಬೈಠಕ್ ನಡೆದಿದ್ದು ಒಂದೊಂದು ಬೈಠಕ್ ಒಂದು ಗಂಟೆಗಳ ಕಾಲ ನಡೆದಿವೆ. ಹಾಗೇ ಈ ಗಂಭೀರ ಚರ್ಚೆಗೆ ರಾಜ್ಯ ಪ್ರಮುಖ ನಾಯಕರುಗಳಿಗೆ ಪ್ರವೇಶ ಇರಲಿಲ್ಲ.