Thursday, March 27, 2025
ದಕ್ಷಿಣ ಕನ್ನಡಶಿಕ್ಷಣ

ನಾಳೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಅಣ್ಣಾಮಲೈ ಭೇಟಿ -ಕಹಳೆ ನ್ಯೂಸ್

ಕಲ್ಲಡ್ಕದ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಯದಲ್ಲಿ ನಾಳೆ ಪ್ರಚಲಿತ ಭಾರತ; ಸತ್ಯ – ಮಿಥ್ಯೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಶ್ರೀ ರಾಮ ಪದವಿ ಕಾಲೇಜಿನ ಆಜಾದ್ ಭವನದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮಿಳುನಾಡಿನ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಾಯಾಜಿ ವಹಿಸಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಪ್ರಸ್ತಾವನೆ ಮಾಡಲಿದ್ದಾರೆ. ಅಣ್ಣಾಮಲೈ ಅವರು ನನ್ನ ದೇಶ ನನ್ನ ಹೊಣೆಗಾರಿಕೆ ಎಂಬ ವಿಷಯದ ಕುರಿತು ಗೋಷ್ಟಿ ಮಾಡಲಿದ್ದು, ಬೆಂಗಳೂರಿನ ನ್ಯಾಯವಾದಿಗಳಾದ ಕ್ಷಮಾ ನರಗುಂದ ಅವರು ನರೇಟಿವ್ ಹಾಗಂದರೇನು ಎಂಬ ವಿಷಯದ ಕುರಿತು ಮತ್ತು ಕಾರ್ಕಳ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇಸ್ರೇಲ್ ನಾವರಿಯದ ಸತ್ಯಗಳು ಎಂಬ ವಿಷಯದ ಕುರಿತು ಮತ್ತು ಇತಿ ಹಾಸ ಸಂಶೋಧಕರಾದ ವಿಕ್ರಮ್ ಸಂಪತ್ ಅವರು ಕಲಿತ ಪಾಠಗಳು ಅರಿಯದ ನೋಟಗಳು ಎಂಬ ವಿಷಯದ ಕುರಿತು ಗೋಷ್ಟಿ ನಡೆಸಿಕೊಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ಗೋಷಿಗೆ ಒಂದು ಸಂಸ್ಥೆಯಿಂದ 4 ವಿದ್ಯಾರ್ಥಿಗಳು ಹಾಗೂ ಓರ್ವ ಪ್ರಾಧ್ಯಾಪಕರು ವಾಗವಹಿಸಬಹುದು. ಮಂಗಳೂರು ವಿವಿ ಹೊರತುಪಡಿಸಿ ಇತರ ವಿಶ್ವವಿದ್ಯಾನಿಲಯ ಹಾಗೂ ಅನ್ಯ ರಾಜ್ಯದ ಪ್ರತಿನಿಧಿಗಳು ಮುಂಚಿತವಾಗಿ ಸೂಚಿಸಿದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಭಾಗವಹಿಸುವ ಎಲ್ಲರಿಗೂ ಒಒಡಿ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಪ್ರತೀ ಅವಧಿಯ ಕೊನೆಯಲ್ಲಿ ಪ್ರಶ್ನೋತ್ತರಕ್ಕೆ ಅವಕಾಶವಿದೆ. ಭಾಗವಹಿಸುವಿಕೆಯ ಬಗ್ಗೆ 8277310591 ಹಾಗೂ ಹೆಚ್ಚಿನ ಮಾಹಿತಿಗಾಗಿ 9964280734ನ್ನು ಸಂಪರ್ಕಿಸಬಹುದು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ