Monday, March 31, 2025
ದಕ್ಷಿಣ ಕನ್ನಡಮಾರುಕಟ್ಟೆವಾಣಿಜ್ಯಸುದ್ದಿ

ಕರಿಮೆಣಸು ಬೆಳೆಗಾರರಿಗೆ ಬಂಪರ್ ಸುದ್ದಿ; ಬೆಲೆ ಗಗನಕ್ಕೇರುವ ಸಾಧ್ಯತೆ -ಕಹಳೆ ನ್ಯೂಸ್

ಕರಿಮೆಣಸು(ಕಾಳುಮೆಣಸು) ಬೆಳೆಗಾರರಿಗೆ ಬಂಪರ್ ಸುದ್ದಿ. ಕರಿಮೆಣಸು ಬೆಲೆ ಕೆಲವೇ ದಿನಗಳಲ್ಲಿ ಗಗನಕ್ಕೇರುವ ಸಾಧ್ಯತೆ ಇದ್ದು, ಕರಾವಳಿಯ ಅದ್ರಲ್ಲೂ ದ.ಕ ಜಿಲ್ಲೆಯ ಕೃಷಿಕರಿಗೆ ಈ ಬಾರಿ ಬಂಪರ್ ಹೊಡೆಯುವ ಸಾಧ್ಯತೆ ಇದೆ. ಹೌದು. ವಿಯೇಟ್ನಂನಲ್ಲಿ ವಾತಾವರಣ ವೈಪರೀತ್ಯದಿಂದಾಗಿ ಕರಿಮೆಣಸು ಬೆಳೆ ನಾಶಗೊಂಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕರಿಮೆಣಸು ಅಭಾವ ಉಂಟಾಗಿದೆ. ಹಾಗಾಗಿ ಕರಾವಳಿ ಭಾಗದಲ್ಲಿ ಕರಿಮೆಣಸು ಬೆಳೆಯುವ ಕೃಷಿಕರಿಗೆ ಇದರಿಂದಾಗಿ ಲಕ್ ಹೊಡೆಯುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಾಳುಮೆಣಸು ಉತ್ಪಾದನೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಅದ್ರಲ್ಲೂ ಕರಾವಳಿಯಲ್ಲಿ ಅತಿ ಹೆಚ್ಚು ಕಾಳುಮೆಣಸು ಉತ್ಪಾದಿಸಲಾಗುತ್ತಿದೆ. ಇಡುಕ್ಕಿ ಕೇರಳದ ಪ್ರಮುಖ ಕಾಳುಮೆಣಸು ಉತ್ಪಾದನಾ ಕೇಂದ್ರವಾಗಿದ್ದು, ವಯನಾಡು ಎರಡನೇ ಸ್ಥಾನದಲ್ಲಿದೆ. ಸದ್ಯ ಕರಿಮೆಣಸು ಬೆಲೆ ಕೆಜಿಗೆ 628 ರೂ ಆಗಿದ್ದು, ಇನ್ನೂ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ