
ಜ.24. .ದ.ಕ ಜಿ. ಹಿರಿಯ ಪ್ರಾಥಮಿಕ ಶಾಲೆ ಸಾಜ ಇಲ್ಲಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ . ಇದರ ಎನ್.ಎಸ್.ಎಸ್ / ರಾಷ್ಟ್ರೀಯ ಸೇವಾಯೋಜನೆ ಘಟಕ ದ ಸುಮಾರು 60 ಶಿಬಿರಾರ್ಥಿಗಳು 2024-25 ನೇ ಸಾಲಿನ 7 ದಿನಗಳ ವಾರ್ಷಿಕ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ಈ ಕ್ಯಾಂಪ್ ನಲ್ಲಿ ಅಕ್ಷಯ್ ಆಚಾರ್ಯ , ಇವರ ನೇತೃತ್ವದಲ್ಲಿ ಶಾಲೆಯ ಗೋಡೆಗಳ ಮೇಲೆ ಆಕರ್ಷಕ ವರ್ಲಿ ವರ್ಣಚಿತ್ರಗಳು, ಪ್ರಾಸಾದ್ ನೇತ್ರ ಚಿಕಿತ್ಸಾಲಯ ಮಂಗಳೂರು ಇವರಿಂದ ನೇತ್ರ ತಪಾಸಣೆ , ಪ್ರಾಥಮಿಕ ಆರೋಗ್ಯ ಕೇಂದ್ರ ಪಾಣಾಜೆ ಇವರಿಂದ ವೈದ್ಯಕೀಯ ತಪಾಸಣಾ ಶಿಬಿರ ಗ್ರಾಮ ಪಂಚಾಯತ್ ಬಲ್ನಾಡು ಸಹಯೋಗದೊಂದಿಗೆ ಸ್ವಚ್ಚತಾ ಕಾರ್ಯ. ಶ್ರಮದಾನ ಕಾರ್ಯ, ಜಾಗೃತಿ ಕಾರ್ಯಕ್ರಮ ,ಊರಿನವರಿಗೆ ಕ್ರೀಡಾಕೂಟ ಶಾಲಾ ಮಕ್ಕಳಿಗೆ ಕರಕುಶಲ ಕೌಶಲ್ಯ ತರಬೇತಿ ಇತ್ಯಾದಿ ಅನೇಕ ಕಾರ್ಯಕ್ರಮಗಳನ್ನು ಅತ್ಯಂತ ಉತ್ತಮವಾಗಿ ನಡೆಸಿಕೊಟ್ಟರು. ಕ್ಯಾಂಪ್ ನ ಮೇಲ್ವಿಚಾರಣೆಯನ್ನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಜ್ಯೋತಿ ಪಿ.ಎಸ್ ಸಂಪೂರ್ಣವಾಗಿ ನಿರ್ದೇಶಿಸಿದರು. ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಸಹಕರಿಸಿದರು. ಎಸ್.ಎಸ್ ಶಿಬಿರಕ್ಕೆ ಊರಿನವರು ಆರ್ಥಿಕವಾಗಿ ಮತ್ತು ವಸ್ತು ರೂಪದಲ್ಲಿ ಉತ್ತಮ ಸಹಕಾರವನ್ನು ನೀಡಿದ್ದಾರೆ….
ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಪ್ರಾಂಶುಪಾಲರಾದ ಪ್ರೊ. ಪದ್ಮನಾಭ ರಾ.ಸೇ ಯೋಜನೆಯು ನಮ್ಮ ನಿತ್ಯ ಜಿವನದ ಭಾಗವಾದರೆ ಮಾತ್ರ ಶಿಬಿರವು ಅರ್ಥಪೂರ್ಣವಾಗಲು ಸಾಧ್ಯ ಎಂದರು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುಧಾಕರ ನಾಯಕ್ ವಹಿಸಿದ್ದರು ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಭಟ್ ಬಿ ಆರ್ , ರಾಧಾಕೃಷ್ಣ ಆಳ್ವ ಸಾಜ ,ಲೋಕೇಶ್ ಎಸ್.ಆರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ,ಮುರಳಿಕೃಷ್ಣ ಹಸಂತಡ್ಕ, ಚಂದಪ್ಪ ಪೂಜಾರಿ ಕಾಡ್ಲ, ಸಿ.ಆರ್ .ಪಿ ಶಾಲಿನಿ. ಬಿ. ರಮಾನಾಥ್ ವಿಟ್ಲ, ಶಿಬಿರದ ಮೇಲ್ವಿಚಾರಕರಾದ ಡಾ.ಜ್ಯೋತಿ ಪಿ.ಎಸ್ , ನಿವೃತ್ತ ಪ್ರಾಂಶುಪಾಲರಾದ ಡಾ.ಶಂಕರ್ ಪಾಟಾಳಿ.
ಗ್ರಾಮ ಪಂಚಾಯತ್ ಸದಸ್ಯರಾದ ಶೋಭಾ ಮುರುಂಗಿ, ವಸಂತಿ ಸಾಜ, ಕೃಪಾಣ್ ಕುಮಾರ್ ಅಟ್ಲಾರು , ಸುಂದರ ಪೂಜಾರಿ ಕಾಡ್ಲ, ಹಮೀದ್ ಸಾಜ ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಾಂತ ಸಿ ಮೊದಲಾದವರು ಉಪಸ್ಥಿತರಿದ್ದರು. ಕ್ಯಾಂಪ್ ವಿದ್ಯಾರ್ಥಿಗಳು ಮತ್ತು ಶಾಲಾ ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಸಹಕರಿಸಿದರು.