ಇತಿಹಾಸದಲ್ಲಿ ಮೊದಲ ಬಾರಿಗೆ ಫೆ.27ರಿಂದ ವಿಧಾನಸೌಧದ ಆವರಣದಲ್ಲಿ 4 ದಿನಗಳ ಪುಸ್ತಕ ಮೇಳ ಆಯೋಜಿಸಿದ ಸ್ಪೀಕರ್ ಯು.ಟಿ.ಖಾದರ್ – ಕಹಳೆ ನ್ಯೂಸ್

ಬೆಂಗಳೂರು : ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ 4 ದಿನಗಳ ಪುಸ್ತಕ ಮೇಳ ನಡೆಯುತ್ತಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಪುಸ್ತಕಮೇಳದ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದರು. ಫೆ.27, 28, ಮಾ.01 ಮತ್ತು 02 ರವರೆಗೆ ವಿಧಾನಸೌಧದಲ್ಲಿ ಪುಸ್ತಕಮೇಳ ನಡೆಯಲಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ. ಮಾ.2 ರಂದು ಸಾಧುಕೋಕಿಲ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿಗಳು ನಡೆಯಲಿದೆ ಎಂದರು.
ಲೇಖಕರು ಪುಸ್ತಕ ಬಿಡುಗಡೆ ಮಾಡುತ್ತಾರೆ. ಪುಸ್ತಕ ಸ್ಟಾಲ್‌ಗಳನ್ನ, ಹೊಸ ಪುಸ್ತಕಗಳನ್ನು ಬೇರೆಯವರಿಗೆ ಕೊಡುತ್ತೇವೆ. ಸರ್ಕಾರದ ಎಲ್ಲಾ ಭಾಷಾ ಅಕಾಡೆಮಿಗಳಿಗೆ ಒಂದೊಂದು ಸ್ಟಾಲ್ ಮೀಸಲು ಕೊಡುತ್ತಿದ್ದೇವೆ. ಸಾರ್ವಜನಿಕರಿಗೆ ಮುಕ್ತ ಅವಕಾಶ ಇರಲಿದೆ. 15 ವಿಷಯಗಳಲ್ಲಿ ಸಂವಾದ ಕಾರ್ಯಕ್ರಮ ಇರಲಿವೆ. ನಿತ್ಯ 4 ವಿಷಯಗಳ ಮೇಲೆ ಸಂವಾದಗಳು ನಡೆಯಲಿದೆ. ಸಂವಿಧಾನ, ಕ್ರೀಡೆ, ಕನ್ನಡ ಸಾಹಿತ್ಯ, ಮಕ್ಕಳ ಸಾಹಿತ್ಯ, ಚಲನಚಿತ್ರ ಸೇರಿ ಹಲವು ವಿಷಯಗಳ ಬಗ್ಗೆ ಸಂವಾದ ನಡೆಯಲಿದೆ. ವಿವಿಧ ಶಾಲೆಗಳಿಂದ ಬರುವ ಮಕ್ಕಳಿಗೆ ಅಸೆಂಬ್ಲಿ ಹಾಲ್ ನೋಡಲು ಅವಕಾಶ ಕೊಡುತ್ತಿದ್ದೇವೆ. ಶಾಸಕರ ಕ್ಷೇತ್ರಗಳ ಹಾಗೂ ಶಾಲಾ ಗ್ರಂಥಾಲಯಗಳಿಗೆ ಬುಕ್ ಖರೀದಿಗೆ 2 ಲಕ್ಷ ರೂ. ಹಣ ಕೊಡಲಾಗುತ್ತದೆ ಎಂದು ಹೇಳಿದರು.
5 ಜನರಿಗೆ ಪ್ರತಿಭಾ ಪುರಸ್ಕಾರ ಮಾಡುತ್ತೇವೆ. 5 ಜನರ ಆಯ್ಕೆಗೆ ಸಮಿತಿ ಮಾಡಲಿದೆ. ಮಾ.2 ರವರೆಗೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಮಾ.3 ರಂದು ಶಾಸಕರಿಗೆ ಪುಸ್ತಕ ಮೇಳ ಇರಲಿದೆ. ಪುಸ್ತಕ ಮೇಳಕ್ಕೆ ರಾಜ್ಯಪಾಲರಿಗೂ ಆಹ್ವಾನ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.