ತೀರಾ ಅಗತ್ಯದ ಸಂದರ್ಭದಲ್ಲಿ ದೊರೆತ ಚಿಕ್ಕ ಸಹಾಯಯು ಅತ್ಯಂತ ಬೆಲೆಯುಳ್ಳದಾಗಿರುತ್ತದೆ..ರಮೇಶ್ -ಕಹಳೆ ನ್ಯೂಸ್

ಬಂಟ್ವಾಳ : ವಿದ್ಯಾದಾನವು ದೇವರಿಗೆ ಪ್ರಿಯವಾದ ಕೆಲಸ ವಾಗಿದೆ.ಪ್ರಸಾದ ರೂಪದಲ್ಲಿ ಏನೇ ಸಿಕ್ಕರು ಅದರ ಹತ್ತುಪಾಲುಗಳಷ್ಟು ಪರಿಶ್ರಮರಹಿತ ಫಲ ಸಿಕ್ಕೇ ಸಿಗುತ್ತದೆ ತೀರಾ ಅಗತ್ಯದ ಸಂದರ್ಭದಲ್ಲಿ ದೊರೆತ ಸಹಾಯ ಚಿಕ್ಕದಾದರೂ ಅತ್ಯಂತ ಬೆಲೆಯುಳ್ಳದಾಗಿರುತ್ತದೆ. ಒಳ್ಳೆಯ ಕೆಲಸಗಳಿಗೆ ದೇವರ ಆಶೀರ್ವಾದ ಎಂದಿಗೂ ಇರುತ್ತೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ಹೇಳಿದರು.
ಅವರು ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲಾ ಶೌಚಾಲಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ ಅನುದಾನದ ಮಂಜುರಾತಿ ಪತ್ರ ಹಸ್ತಾಂತರ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಜಿ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ವನಿತಾ, ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ವೀರಕಂಬ ಒಕ್ಕೂಟ ಅಧ್ಯಕ್ಷೆ ಶಾಂಭವಿ ಆಚಾರ್ಯ, ಒಕ್ಕೂಟ ಸೇವಾ ಪ್ರತಿನಿಧಿ ವಿಜಯ, ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಚಿನ್ನಾ ಕಲ್ಲಡ್ಕ, ಶಾಲಾ ದೈಹಿಕ ಶಿಕ್ಷಕ ಇಂದು ಶೇಖರ್, ಶಿಕ್ಷಕಿಯರಾದ , ಶಕುಂತಲಾ ಸಂಗೀತ ಶರ್ಮ, ಮಮತಾ, ಅನುಷಾ,ಮುರ್ಷಿದಾ, ಸಂಪ್ರಿಯ,ಜಯಲಕ್ಷ್ಮಿ, ಭವ್ಯ,ಹರಿಣಾಕ್ಷಿ,ಹೇಮಲತಾ, ಪಲ್ಲವಿ ಮೊದಲಾದವರು ಉಪಸ್ಥಿತರಿದ್ದರು.