ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಲ್ಲಿ ಕೊಮೋಡಾ ವೀಲ್ ಚಯರ್ ವಿತರಣೆ-ಕಹಳೆ ನ್ಯೂಸ್

ಬಂಟ್ವಾಳ :ಕೆದಿಲ ಗ್ರಾಮದ ಕರಿಮಜಲು ಪ್ರೇಮ W/O ರಾಮಮೂಲ್ಯ ಮತ್ತು ಕಂಪ ಲೋಕಯ ಗೌಡ ಇವರು ಅಸೌಖ್ಯಂದಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಶೌಚಾಲಯಕ್ಕೆ ಅನುಕೂಲಕ್ಕಾಗಿ ಕೊಮೋಡೋ ವೀಲ್ ಚಯರನ್ನು ವಿಟ್ಲ ತಾಲೂಕು ಕೃಷಿ ಅಧಿಕಾರಿಯವರಾದ ಚಿದಾನಂದರವರು ಮತ್ತು ಪೆರ್ನೆ ವಲಯ ಮೇಲ್ವಿಚಾರಕರಾದ ಶಾರದಾ ಮೇಡಂ ರವರು ವಿತರಿಸಿದರು.
ಈ ಸಂದರ್ಭದಲ್ಲಿ ಕೆದಿಲ “A” ಒಕ್ಕೂಟದ ಸೇವಾಪ್ರತಿನಿಧಿ ಯವರಾದ ಶಾರದಾರವರು ಮತ್ತು ಕೆದಿಲ “B” ಒಕ್ಕೂಟದ ಸೇವಾಪ್ರತಿನಿಧಿಯವರಾದ ಜಯಂತಿ ರವರು, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕೆದಿಲದ ಜಗದೀಶ, ವೆಂಕಪ್ಪ , ಶೀನಪ್ಪ,ಗಿರೀಶರವರು ಉಪಸ್ಥಿತರಿದ್ದರು.