Tuesday, April 8, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ವಾರ್ಡ್ 18 ಕಾವೂರು 57 ಲಕ್ಷ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಅವರಿಂದ ಗುದ್ದಲಿ ಪೂಜೆ-ಕಹಳೆ ನ್ಯೂಸ್

ಮಂಗಳೂರು: ಕಾವೂರು 18 ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು ಮಂಗಳೂರು ಮಹಾನಗರ ಪಾಲಿಕೆಯ ಅನುದಾನದಲ್ಲಿ 57 ಲಕ್ಷ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಆಕಾಶಭವನ ಮುಖ್ಯರಸ್ತೆ ಡಾಮರು ಅಭಿವೃದ್ಧಿ, ಸೂಜಿಕಲ್ ಗುಡ್ಡೆ ಒಳಚರಂಡಿಯ ಅಭಿವೃದ್ಧಿ, ಮತ್ತು ಕಾಫಿಗುಡ್ಡೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸರಕಾರಿ ಬಾವಿಯ ಲೋಕಾರ್ಪಣೆಯನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿ ನೆರವೇರಿಸಿದರು.

ಮೇಯರ್ ಮನೋಜ್ ಕುಮಾರ್ ಮ.ನ.ಪಾ ಸದಸ್ಯರಾದ ಶ್ರೀಮತಿ ಗಾಯತ್ರಿ ಎ ರಾವ್ ಮಂಗಳೂರು ಉತ್ತರ ಮಂಡಲ ಉಪಾಧ್ಯಕ್ಷರಾದ ಆನಂದ ಪಾಂಗಳ ವಾರ್ಡ್ ಬಿಜೆಪಿ ಅಧ್ಯಕ್ಷರಾದ ಕೊರಗಪ್ಪ ಶೆಟ್ಟಿ ಆಕಾಶಭವನ, ಕಾರ್ಯದರ್ಶಿ ಜಗದೀಶ್ ಅಂಚನ್ ಬಿಜೆಪಿ ಉತ್ತರಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ರಕ್ಷಿತ್ ಪೂಜಾರಿ ಬೂತ್ ಅಧ್ಯಕ್ಷರುಗಳಾದ ದಿವಾಕರ್ ಪೂಜಾರಿ ಸಚಿನ್ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರಶಾಂತ್ ಪೂಜಾರಿ,ಸಂದೀಪ್ ಶೆಟ್ಟಿ ವಾರ್ಡ್ ಪ್ರಮುಖರಾದ ಜಯ ನಾಯ್ಕ್, ಚೇತನ್ ಕುಲಾಲ್, ಸ್ಥಳೀಯ ನಿವಾಸಿಗಳು,ನಾಗರಿಕರು, ಸಮಸ್ತ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ