ಇಡ್ಯಾ ಪೂರ್ವ 6ನೇ ವಾರ್ಡಿನಲ್ಲಿ ಶಾಸಕರು ಡಾ. ವೈ ಭರತ್ ಶೆಟ್ಟಿಯವರಿಂದ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಉದ್ಘಾಟನೆ-ಕಹಳೆ ನ್ಯೂಸ್

ಮಂಗಳೂರು: ಕಟ್ಲ ಕ್ರಾಸ್ ಬಳಿ, ಮತ್ತು ಲಲಿತ್ ಹೋಟೆಲ್ ನೂತನ ಬಸ್ಸು ತಂಗುದಾಣದ ಗುದ್ದಲಿ ಪೂಜೆ ಹಾಗೂ ಸುರತ್ಕಲ್ ಹಿಂದೂ ರುದ್ರಭೂಮಿಯಲ್ಲಿ ನೂತನವಾಗಿ ಅಳವಡಿಸಿರುವ ಹೈ ಮಾಸ್ಕ್ ದೀಪ ಮತ್ತು ಎಲ್ ಇ ಡಿ ಲೈಟ್, ಮತ್ತು ಕಟ್ಲ ಕ್ರಾಸ್ ಬಳಿಯಿಂದ ದಿವ್ಯರಾಜ್ ಸರ್ಕಲ್ ತನಕ ಅಳವಡಿಸಿರುವ ದಾರಿ ದೀಪದ ಉದ್ಘಾಟನೆಯನ್ನು ಮಾನ್ಯ ಶಾಸಕರು ಡಾ. ವೈ ಭರತ್ ಶೆಟ್ಟಿ ನೆರವೇರಿಸಿದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರು ಶ್ರೀಮತಿ ಸರಿತಾ ಶಶಿಧರ್ ಬಿಜೆಪಿ ಮಹಾ ಶಕ್ತಿಕೇಂದ್ರ ಅಧ್ಯಕ್ಷರು ದಿನಕರ್ ಇಡ್ಯಾ, ವಾರ್ಡ್ ಅಧ್ಯಕ್ಷರು ಶಶಿಧರ್ ಕಟ್ಲ, BASF ಇಂಡಿಯಾ ಲಿಮಿಟೆಡ್ ಹೆಚ್ ಎಸ್ ಆರ್ ಸಂತೋಷ್ ಪೈ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು ವರುಣ್ ಚೌಟ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು ಶ್ವೇತಾ ಪೂಜಾರಿ, ಮಾಜಿ ಕಾರ್ಪೊರೇಟರ್ ಗುಣಶೇಖರ್ ಶೆಟ್ಟಿ, ಅಶೋಕ್ ಶೆಟ್ಟಿ, ಮಹಾಬಲ ಪೂಜಾರಿ ಕಡಂಬೋಡಿ ತುಳುನಾಡು ads, ಪ್ರಮುಖರು *ಪಕ್ಷದ ಅನನ್ಯ ಜವಾಬ್ದಾರಿಯುತ ಪದಾಧಿಕಾರಿಗಳು,ಬೂತ್ ಅಧ್ಯಕ್ಷರು ಕಾರ್ಯದರ್ಶಿಗಳು, ಕಾರ್ಯಕರ್ತರು ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು .