Friday, September 20, 2024
ಸುದ್ದಿ

ಇಂದಿರಾ ಕ್ಯಾಂಟೀನ್ ಕಾಂಪೌಂಡ್ ಕಾಮಗಾರಿ ವಿವಾದ ಮತ್ತೆ ಆರಂಭ – ಕಹಳೆ ನ್ಯೂಸ್

ಬಂಟ್ವಾಳ: ಇಂದಿರಾ ಕ್ಯಾಂಟೀನ್ ಕಾಂಪೌಂಡ್ ಕಾಮಗಾರಿ ವಿವಾದ ಮತ್ತೆ ಆರಂಭ ಇಂದಿರಾ ಕ್ಯಾಂಟೀನ್ ಸುತ್ತ ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದ ವೇಳೆ ಪುರಸಭಾ ಸದಸ್ಯ ಗೋವಿಂದ ಪ್ರಭು ಮತ್ತು ದೇವದಾಸ್ ಶೆಟ್ಟಿ ವಿರೋಧಿಸಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಆ ಸಂದರ್ಭದಲ್ಲಿ ನಗರ ಠಾಣಾಎಸೈ ಚಂದ್ರಶೇಖರ್‌ರವರು ಅವರ ಮನವೊಳಿಸಿ ಹೊರಗೆ ಕಳುಹಿಸಿದರು. ಇಂದಿರಾ ಕ್ಯಾಂಟೀನ್ ಕಾಂಪೌಂಡ್ ಕಾಮಗಾರಿ ವಿವಾದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್ ಅಕ್ರಮವಾಗಿ ನಡೆಯುವ ಇಂದಿರಾ ಕ್ಯಾಂಟೀನ್ ಕಾಂಪೌಂಡ್ ಕಾಮಗಾರಿಯನ್ನು ನಿಲ್ಲಿಸುವಂತೆ ಪೋಲೀಸ್ ಅಧಿಕಾರಿ ಮತ್ತು ಕಂದಾಯ ಅಧಿಕಾರಿಗಳಲ್ಲಿ ಪಟ್ಟು ಹಿಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ರಮವಾಗಿ ನಡೆಯುವ ಇಂದಿರಾ ಕ್ಯಾಂಟೀನ್ ಕಾಂಪೌಂಡ್ ಕಾಮಗಾರಿಯನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು, ಮೊದಲು ದಾಖಲೆ ಪತ್ರ ನೀಡಿ ಆ ಮೇಲೆ ಕೆಲಸ ಮುಂದುವರೆಸಿ ಅಕ್ರಮವಾಗಿ ನಡೆಯುವ ಕಾಮಗಾರಿಗಳಿಗೆ ಯಾವುದೇ ಕಾರಣಕ್ಕೂ ಸಹಕಾರ ನೀಡುವುದಿಲ್ಲ ಎಂದರು.

ಜಾಹೀರಾತು

ಸ್ಥಳಕ್ಕೆ ನೂರಾರು ಮಂದಿ ಜಮಾವಣೆ, ಪೋಲೀಸ್ ಬಂದೋಬಸ್ತ್, ಈ ಕಾಮಗಾರಿಯನ್ನು ನಡೆಸಲು ಪುರಸಭೆ ಪೋಲೀಸ್ ರಕ್ಷಣೆ ಕೇಳಿದ್ದು ಸ್ಥಳದಲ್ಲಿ ಬಾರಿಕೇಡ್ ಗಳನ್ನು ಹಾಕಿ ಮೊಕ್ಕಾಂ ಹೂಡಿದ್ದಾರೆ.

ಈ ಸಂಧರ್ಭದಲ್ಲಿ ನಗರ ಠಾಣಾಧಿಕಾರಿ ಚಂದ್ರಶೇಕರ್, ಅಪರಾಧ ವಿಭಾಗದ ಎಸೈ ಹರೀಶ್, ಬಂಟ್ವಾಳ ಎಎಸ್‌ಪಿ ಋಷಿಕೇಶ್ ಭಗವಾನ್ ಸೋನಾವಣೆ,ಗ್ರಾಮಾಂತರ ಪ್ರಸನ್ನ ಪರಿಸ್ಥಿತಿನಿಯಂತ್ರಣ.