ಮಂಗಳೂರು:ಪಾಲಿಕೆ ಬಿಜೆಪಿ ಆಡಳಿತಾವಧಿ ಪೂರ್ಣ; ಶೀಘ್ರದಲ್ಲಿ ಆಡಳಿತಾಧಿಕಾರಿ ನೇಮಕ-ಕಹಳೆ ನ್ಯೂಸ್

ಮಂಗಳೂರು: ಮಹಾನಗರ ಪಾಲಿಕೆಯ ಪ್ರಸಕ್ತ ಅವಧಿಯ ಬಿಜೆಪಿ ಆಡಳಿತ ಫೆ.27ಕ್ಕೆ ಅಂತ್ಯಗೊಂಡಿದೆ. ಮುಂದಿನ ಚುನಾವಣೆ ಘೋಷಣೆಯಾಗಿ ಹೊಸ ಸದಸ್ಯರು ಆಯ್ಕೆಯಾಗುವವರೆಗೆ ಆಡಳಿತಾಧಿಕಾರಿಗಳು ಪಾಲಿಕೆಯನ್ನು ಮುನ್ನಡೆಸಲಿದ್ದಾರೆ.
ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಅಧ್ಯಕ್ಷತೆಯಲ್ಲಿ ಪಾಲಿಕೆಯ ಕೊನೆಯ ಸಾಮಾನ್ಯ ಸಭೆ ಗುರುವಾರ ನಡೆಯಿತು.
2019ರ ನ.12ರಂದು ಪಾಲಿಕೆ ಚುನಾವಣೆ ನಡೆದಿತ್ತು. ಆದರೆ ಮೇಯರ್ ಮೀಸಲಾತಿ ತಡವಾಗಿದ್ದರಿಂದ 2020ರ ಫೆ.27ರಂದು ಮೊದಲ ಮೇಯರ್ ಅಧಿಕಾರ ಸ್ವೀಕರಿಸಿದರು.
ಆ ದಿನದಿಂದ 5 ವರ್ಷ ಪಾಲಿಕೆ ಆಡಳಿತ ಅವಧಿ ಸಿಕ್ಕಿದ್ದು, 2025ರ ಫೆ. 27 ಕೊನೆಯ ದಿನ. ಮುಂದಿನ ಚುನಾವಣೆಗಾಗಿ ಸದ್ಯಕ್ಕೆ ಯಾವುದೇ ತಯಾರಿ ನಡೆದಿಲ್ಲ. ಸರಕಾರ ಇನ್ನೂ ಮೀಸಲಾತಿ ಹೊರಡಿಸಿಲ್ಲ. ಹೀಗಾಗಿ ಇನ್ನು ಕೆಲವು ತಿಂಗಳು ಚುನಾವಣೆ ನಡೆಯುವ ಯಾವುದೇ ಸೂಚನೆ ಇಲ್ಲ.