ಅಶೋಕ್ ರೈ ಸಾರಥ್ಯದಲ್ಲಿ ನಾಳೆ ಪುತ್ತೂರಿನ ತೆಂಕಿಲದಲ್ಲಿ ನಿರ್ಮಾಣವಾಗಲಿರುವ ಪುತ್ತೂರಿನ ಅತ್ಯುನ್ನತ ಸೌಲಭ್ಯಗಳನ್ನು ಹೊಂದಿರುವ ‘ ಆರ್‌ಇಬಿ ಪುತ್ತೂರು ಹೈಟ್ಸ್ ‘ ಭೂಮಿ ಪೂಜೆ – ಕಹಳೆ ನ್ಯೂಸ್
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯುನ್ನತ್ತ ಸೌಲಭ್ಯಗಳನ್ನೊಳ್ಳಗೊಂಡ ವಿನೂತನ ಶೈಲಿಯ ಮತ್ತು ಅತೀ ಎತ್ತರ ವಿನ್ಯಾಸದ ವಸತಿ ಮತ್ತು ವಾಣಿಜ್ಯ ಸಮುಚ್ಚಾಯ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ತನ್ನ ಮಹತ್ವಾಕಾಂಕ್ಷೆಯ ಆರ್‌ಇಬಿ ಪುತ್ತೂರು ಹೈಟ್ಸ್ ಲೋಕಮುಖಕ್ಕೆ ಪರಿಚಯವಾಗಲು ಸಜ್ಜಾಗುತ್ತಿದೆ.
ಕಳೆದ 19 ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕ್ರೀಯವಾಗಿರುವ ರೈ ಎಸ್ಟೇಟ್ ಆಂಡ್ ಬಿಲ್ಡರ್ (ಆರ್‌ಇಬಿ) ಇದೀಗ ವಿವಿಧ ವಿಶೇಷತೆಯೊಂದಿಗೆ ಪುತ್ತೂರು ಬೈಪಾಸ್ ರೋಡ್ ತೆಂಕಿಲದಲ್ಲಿ ತನ್ನ ನೂತನ ಸಮುಚ್ಚಯದ ಶಿಲಾನ್ಯಾಸವನ್ನ ನೇರವೆರಿಸಲಿದೆ.
ಮಂಗಳೂರು,ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವಾರು ಸಮುಚ್ಚಯಗಳನ್ನ ಸ್ಥಾಪಿಸಿ ಇದೀಗ ನುರಿತ ಆರ್ಕಿಟೆಕ್ಟ್ಗಳ ಕ್ರಿಯಾತ್ಮಕ ವಿನ್ಯಾಸಗಳ ಮೂಲಕ ವಿವಿಧ ಕಟ್ಟಡಗಳನ್ನ ಪರಿಚಯಿಸುತ್ತಿರುವ ಆರ್‌ಇಬಿ , ಪುತ್ತೂರಿನ ಪ್ರಕೃತಿ ರಮಣೀಯ ತಾಣದಲ್ಲಿ ಆರ್‌ಇಬಿ ಪುತ್ತೂರು ಹೈಟ್ಸ್ ಎಂಬ 2 ಬ್ಲಾಕ್‌ಗಳಲ್ಲಿ 6 ಸಮುಚ್ಚಯಗಳನ್ನೊಳಗೊಂಡ ಸಮುಚ್ಚಯ ಸಿದ್ಧವಾಗಲು ಅಡಿಗಲ್ಲಿಟ್ಟಿದೆ.
80 ಪ್ಲಾ್ಯಟ್ ಮತ್ತು ಪೆಂಟ್‌ಹೌಸ್ ಇದ್ದು ,ಇದರಲ್ಲಿ 10 – 1 ಬಿಹೆಚ್‌ಕೆ,41 – 2 ಬಿಹೆಚ್‌ಕೆ,29 – 3 ಬಿಹೆಚ್‌ಕೆ ಮತ್ತು 28 ಶಾಪ್‌ಗಳನ್ನ ಒಳಗೊಂಡ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಅತ್ಯಾಧುನಿಕ ಸುಸಜ್ಜಿತ ವ್ಯವಸ್ಥೆಗಳನ್ನ ಒಳಗೊಂಡಿದೆ. ಅತ್ಯುತ್ತಮ ಕಟ್ಟಡ ವಿನ್ಯಾಸ ಎಂಬ ಪ್ರಶಸ್ತಿಗೆ ಪಾತ್ರವಾದ ಆರ್‌ಇಬಿ ತನ್ನ ನೂತನ ಸಮುಚ್ಚಯದ ಭೂಮಿ ಪೂಜೆಯನ್ನ ನಾಳೆ ನೆರವೇರಿಸಲಿದೆ.
ಶಿಲಾನ್ಯಾಸ ಕರ‍್ಯಕ್ರಮವನ್ನ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನೆರವೇರಿಸಲಿದ್ದು,ಶಾಸಕ ಸಂಜೀವ ಮಠಂದೂರು,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಇನ್ನಿತ್ತರ ಗಣ್ಯರು ಭಾಗಿಯಾಗಲಿದ್ದಾರೆ.