ವಾಸ್ತವಗಳ ಹಿಂದಿನ ಅಂತಿಮ ಸತ್ಯ ತಿಳಿಯುವುದೇ ನಾರಾಯಣಗುರುಗಳ ಗುರಿಯಾಗಿತ್ತು : ಕೇಶವ ಶಾಂತಿ ನಾಟಿ-ಕಹಳೆ ನ್ಯೂಸ್

ಬಂಟ್ವಾಳ : ವಾಸ್ತವಗಳ ಹಿಂದಿನ ಅಂತಿಮ ಸತ್ಯ ತಿಳಿಯುವುದೇ ನಾರಾಯಣಗುರುಗಳು ಗುರಿಯಾಗಿತ್ತು, ಕೇವಲ ಸತ್ಯವಲ್ಲ ಅಂತಿಮ ಸತ್ಯ, ಇದಕ್ಕಾಗಿ ಗುರುಗಳು ಸಾಧು ಸಂತರನ್ನು ವಿದ್ವಾಂಸರನ್ನು, ಯೋಗಿಗಳನ್ನು ಬೇಟಿಯಾದರು, ಆ ಮೂಲಕ ಶೋಷಿತ ವರ್ಗದಲ್ಲಿ ನವ ಚೈತನ್ಯ ಮತ್ತು ಜಾಗೃತಿ ಮೂಡಿಸಿದರು ಎಂದು ಏರಮಲೆ ಕಾಡೆದಿ ಶ್ರೀ ಭದ್ರಕಾಳಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೇಶವ ಶಾಂತಿ ತಿಳಿಸಿದರು.
ಇವರು ಬಂಟ್ವಾಳ ಯುವವಾಹಿನಿ ಘಟಕದ ಸದಸ್ಯರಾದ ಅಮಿತಾ ಉಮೇಶ್ ಕೈಕುಂಜೆ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 35 ನೇ ಮಾಲಿಕೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಕೋಶಾಧಿಕಾರಿ ಗೀತಾ ಜಗದೀಶ್,ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡ್,ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ,ಶಿವಾನಂದ ಎಂ, ರಾಜೇಶ್ ಸುವರ್ಣ,ಸದಸ್ಯರಾದ ಅಮಿತ ಉಮೇಶ್ , ಯತೀಶ್ ಬೊಳ್ಳಾಯಿ, ಸುಲತಾ ಸಾಲ್ಯಾನ್, ನಾಗೇಶ್ ಏಲಬೆ, ಸುನಿತಾ ನಿತಿನ್, ಯಶೋಧರ ಕಡಂಬಲ್ಕೆ,ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.