ಮಾರ್ಚ್ 9 ರಿಂದ ಮಾರ್ಚ್ 16 ರವರೆಗೆ ನಡೆಯಲಿರುವ ಆದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪುರ್ವಭಾವಿ ಸಭೆ-ಕಹಳೆ ನ್ಯೂಸ್

ಮಂಗಳೂರು: ಮಾರ್ಚ್ 9 ರಿಂದ ಮಾರ್ಚ್ 16 ರವರೆಗೆ ನಡೆಯಲಿರುವ ಆದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬ್ರಹ್ಮಕಲಶೋತ್ಸವ ಸಮಿತಿ ಜೀರ್ಣೋದ್ದಾರ ಸಮಿತಿ ವ್ಯವಸ್ಥಾಪನ ಸಮಿತಿಯ ಪುರ್ವಭಾವಿ ಸಭೆ ಶುಕ್ರವಾರ ಕ್ಷೇತ್ರದ ಸಭಾಂಗಣದಲ್ಲಿ ನೆರವೇರಿತು.
ಸಭೆಯಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿ ಅವರು ಕುಮಾರಿ ಪ್ರಣತಿ ರಾವ್ ಅವರು ಹಾಡಿರುವ ಆದಿನಾಥ ಸನ್ನಿಧಿ ಧ್ವನಿ ಸುರುಳಿ ಬಿಡುಗಡೆಗೊಳಿಸಿ ಬಾಲಕಿಯನ್ನು ಸನ್ಮಾನಿಸಿದರು.ಮುಂಬರುವ ಬ್ರಹ್ಮಕಲಶೋತ್ಸವ ಸಹಿತ ಧಾರ್ಮಿಕ ಕಾರ್ಯಕ್ರಮಗಳನ್ನು ಒಟ್ಟಾಗಿ ಸೇರಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕರೆ ನೀಡಿದರು.
ಈ ಸಂದರ್ಭ ದಕ್ಷಿಣ ಕನ್ನಡದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರು ವಿವಿಧ ಸೇವಾ ಕಾರ್ಯಕ್ರಮಕ್ಕೆ ಭಗವಾಧ್ವಜ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ಗಳಿಗೆ ಚಾಲನೆ ನೀಡಿದರು, ವಿವಿಧ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.