Thursday, April 3, 2025
ಉಡುಪಿಜಿಲ್ಲೆಬೈಂದೂರುಸುದ್ದಿ

ಡೀಮ್ಡ್ ಫಾರೆಸ್ಟ್ ಪಟ್ಟಿ ಯಲ್ಲಿರುವ ಅಕ್ರಮ ಸಕ್ರಮ ಅರ್ಜಿಗಳ ಜಂಟಿ ಸರ್ವೇ ಕಾರ್ಯ ಚುರುಕುಗೊಳಿಸಿ : ಬೈಂದೂರು ತಹಸೀಲ್ದಾರ್ ಗೆ ಬೈಂದೂರು ಶಾಸಕ ಗಂಟಿ ಹೊಳೆ ಸೂಚನೆ-ಕಹಳೆ ನ್ಯೂಸ್

ಬೈಂದೂರು ಹೋಬಳಿಯ ಬಗರ್ ಹುಕುಂ (ಅಕ್ರಮ ಸಕ್ರಮ ) ಹಾಗೂ 94 ಸಿ ಬಾಕಿ ಕಡತಗಳ ವಿಲೇವಾರಿ ಸಂಬಂಧ ಬೈಂದೂರು ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖಾ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿ ಹೊಳೆಯವರು ಮಾತನಾಡಿ ಪ್ರಸ್ತುತ ಬೈಂದೂರು ಹೋಬಳಿಯಲ್ಲಿ ಸಮಸ್ಯಾತ್ಮಕವಲ್ಲದ ಎಲ್ಲಾ ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 35 ಕಡತಗಳು ತಾಂತ್ರಿಕ ಕಾರಣದಿಂದ ಮಂಜುರಾತಿಗೆ ಬಾಕಿ ಇದ್ದು,ಅದನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. ಮುಂದುವರಿದು ಡೀಮ್ಡ್ ಫಾರೆಸ್ಟ್ ಪಟ್ಟಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ. ಅರಣ್ಯ, ಸರ್ವೇ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೇ ಗೆ ಈಗಾಗಲೇ ಅದರಂತೆ ನಿಗದಿ ಪಡಿಸಿದ ಕಾಲ ಮಿತಿಯೊಳಗೆ ಡೀಮ್ಡ್ ಫಾರೆಸ್ಟ್ ನ ಸರ್ವೇ ನಡೆಸಿ ಮೂರು ಇಲಾಖೆಗಳ ಅಗತ್ಯ ಸಮನ್ವಯದೊಂದಿಗೆ ಬಗರ್ ಹುಕುಂ ಕಡತಗಳ ವಿಲೇವಾರಿಗೆ ಪೂರಕ ಕ್ರಮವಾಗ ಬೇಕು ಎಂದರು.ಹಾಗೂ ಬಾಕಿ ಉಳಿದ 94 ಸಿ ಅರ್ಜಿಗಳು ಸಹಾ ವಿಲೇವಾರಿ ಆಗಬೇಕು ಎಂದರು.

ಕುಮ್ಕಿ ವ್ಯಾಪ್ತಿಯಲ್ಲಿರುವ ಅರ್ಜಿಗಳ ವಿಲೇವಾರಿಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಸದನದಲ್ಲಿ ಸಚಿವರ ಗಮನ ಸೆಳೆಯಲಾಗುವುದು :

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಷೇತ್ರದ ಬೈಂದೂರು ಹಾಗೂ ವಂಡ್ಸೆ ಹೋಬಳಿಯಲ್ಲಿ ಕುಮ್ಕಿ ಮಿತಿಯಲ್ಲಿ ಸುಮಾರು ನಮೂನೆ 50,53 ಹಾಗೂ 57 ರಲ್ಲಿ 14,968 ಅರ್ಜಿ ಗಳು ಇದ್ದು, ಸದರಿ ಅರ್ಜಿಗಳ ಪೈಕಿ ಅರ್ಹ ರೈತರಿಗೆ ಭೂ ಮಂಜೂರಾತಿ ಮಾಡಲು ಇದೇ ತಿಂಗಳು ಮಾರ್ಚ್ 3:ರಿಂದ ನಡೆಯುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಸಚಿವರ ಗಮನ ಸೆಳೆಯಲಾಗುವುದು ಆ ಮೂಲಕ ನೈಜ ರೈತಾಪಿ ವರ್ಗದ ಹಿತ ಕಾಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಇದೆ ಸಂದರ್ಭದಲ್ಲಿ ಶಾಸಕರು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ತಾಲೂಕಿನ ತಹಸೀಲ್ದಾರ್, ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ