Thursday, April 3, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಿಸರ್ಗದಲ್ಲಿ ಇರುವ ಪ್ರತಿ ಜೀವಿಗೂ ಬದುಕುವ ಹಕ್ಕಿದೆ.. ನಿತ್ಯಾನಂದ ಶೆಟ್ಟಿ -ಕಹಳೆ ನ್ಯೂಸ್

ಬಂಟ್ವಾಳ : ನಿಸರ್ಗದಲ್ಲಿ ಇರುವ ಪ್ರತಿ ಜೀವಿಗೂ ಬದುಕುವ ಹಕ್ಕಿದೆ ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನಿಸರ್ಗದಲ್ಲಿ ಇರುವ ಇತರ ಜೀವಿಗಳನ್ನು ನಾಶ ಮಾಡುತ್ತಿದ್ದಾನೆ ಎಂದು ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಬಂಟ್ವಾಳ ತಾಲೂಕಿನ ಶೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲನಗಲ ಉಳಿವಿಗಾಗಿ ಸಸ್ಯ ರಾಶಿಗಳ ಮಹತ್ವದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಪಕ್ಷಿಗಳ ಸಂರಕ್ಷಣೆ, ಅಗತ್ಯತೆ ಬಗ್ಗೆ ಮಾಹಿತಿ ನೀಡುವ ಗುಬ್ಬಚ್ಚಿ ಗೂಡು ಅಭಿಯಾನ 309 ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ಪಕ್ಷಿಗಳಿಗೆ ವಾಸಿಸಲು ನೈಸರ್ಗಿಕ ಗೂಡು ತಯಾರಿ,ನೀರು ಆಹಾರ ನೀಡುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷೆ ಮೂಲಕ ವಿವರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷೆ ಉಷಾ, ಹಿರಿಯ ಶಿಕ್ಷಕ ಗೋಪಾಲಗೌಡ, ಮಾಧ್ಯಮ ವರದಿಗಾರ ಚಿನ್ನಾ ಕಲ್ಲಡ್ಕ, ಅಂಗನವಾಡಿ ಸಹಾಯಕಿ ಪುಷ್ಪ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು, ಶಿಕ್ಷಕರು,ಶಾಲಾಬಿವೃದ್ದಿ ಸಮಿತಿಯ ಸದಸ್ಯರು, ಮಕ್ಕಳ ಪೋಷಕರು, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಾಲಾ ಮಕ್ಕಳು jಪ್ರಾರ್ಥಿಸಿ,ಪ್ರಭಾರ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಪಿ ಸ್ವಾಗತಿಸಿ, ಶಿಕ್ಷಕಿ ಜೋಶ್ನಾ ಪ್ರಿಯ ವಾಸ್ ವಂದಿಸಿ, ಶಿಕ್ಷಕಿ ಅನಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಮಲತಾ ಸಹಕರಿಸಿದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ