Thursday, April 3, 2025
ಕಾಸರಗೋಡುಜಿಲ್ಲೆಸುದ್ದಿ

ಕಾಸರಗೋಡು: ಪೆರಿಯಾದಲ್ಲಿ ಚಿರತೆ ಭೀತಿ, ಕೇಂದ್ರೀಯ ವಿ.ವಿ. ಪರಿಸರದಲ್ಲಿ ರಾತ್ರಿ ಕರ್ಫ್ಯೂ ಜಾರಿ-ಕಹಳೆ ನ್ಯೂಸ್

ಕಾಸರಗೋಡು: ಬೇಡಗಂ, ಅಂಬಲತ್ತರ, ಕಾರಡ್ಕ ಮೊದಲಾದೆಡೆಗಳಲ್ಲಿ ಇತ್ತೀಚೆಗೆ ಕೆಲವು ದಿನಗಳಿಂದ ಚಿರತೆ ಭೀತಿ ಎದುರಾಗಿದ್ದು, ಪೆರಿಯದಲ್ಲಿರುವ ಕೇಂದ್ರೀಯ ವಿ.ವಿ. ಪರಿಸರದಲ್ಲಿ ಚಿರತೆ ಕಂಡಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಅರಣ್ಯ ಇಲಾಖೆಗೆ ಚಿರತೆ ಕಂಡಿರುವ ಬಗ್ಗೆ ಮಾಹಿತಿ ನೀಡಿದ್ದು, ಇದರಂತೆ ಮುಂಜಾಗ್ರತಾ ಕ್ರಮದಂಗವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿ.ವಿ.ಯಲ್ಲಿ ಸುಮಾರು 2000 ವಿದ್ಯಾರ್ಥಿಗಳಿದ್ದು, ರಾತ್ರಿ ಹೊತ್ತಿನಲ್ಲಿ ವಿ.ವಿ. ಕ್ಯಾಂಪಸ್‌ನೊಳಗೆ ಇರುವ ಮರಗಳ ಸಮೀಪ ಹೋಗಬಾರದೆಂದೂ, ನಾಯಿ, ಬೆಕ್ಕುಗಳಿಗೆ ಆಹಾರ ನೀಡಬಾರದೆಂದೂ ತಿಳಿಸಲಾಗಿದೆ. ಇವುಗಳನ್ನು ವಿ.ವಿ. ಕ್ಯಾಂಪಸ್‌ನಿಂದ ಹೊರಗೆ ಓಡಿಸಬೇಕೆಂದು ಸೂಚಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿ.ವಿ. ಕ್ಯಾಂಪಸ್‌ನೊಳಗೆ ರಾತ್ರಿ ಸುತ್ತಾಡಬಾರದು, ತುರ್ತು ಅಗತ್ಯಗಳಿಗೆ ಹೊರ ಹೋಗಬೇಕಿದ್ದರೆ ಸೆಕ್ಯೂರಿಟಿಗೆ ಮಾಹಿತಿ ನೀಡಬೇಕು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ