Recent Posts

Sunday, January 19, 2025
ಸುದ್ದಿ

ಶಿರಾಡಿ ಘಾಟಿ ರಸ್ತೆಯಲ್ಲಿ ಇಂದಿನಿಂದ ಎಲ್ಲ ವಾಹನಗಳಿಗೆ ಮುಕ್ತ ಸಂಚಾರ: ಶಶಿಕಾಂತ ಸೆಂಥಿಲ್‌ – ಕಹಳೆ ನ್ಯೂಸ್

ಮಂಗಳೂರು: ಅಧಿಕ ಮಳೆ, ಭೂ ಕುಸಿತ ಉಂಟಾದ ಕಾರಣದಿಂದಾಗಿ ಶಿರಾಡಿ ಘಾಟಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರೀ ಘನ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಗುರುವಾರ ಬೆಳಗ್ಗಿನಿಂದ ಘನ ವಾಹನ ಸಹಿತ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತ ಗೊಳಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದ್ದಾರೆ.

ಈಗ ಸುರಕ್ಷತಾ ಕ್ರಮಗಳಾದ ಬ್ಯಾರಿಯರ್‌ ಗೋಡೆ ನಿರ್ಮಾಣ, ಟ್ರಾಫಿಕ್‌ ಸೇಫ್ಟಿ ಟೇಪ್‌ ಅಳ ವಡಿಕೆ, ಸೂಚನಾ ಫಲಕ, ಕ್ಯಾಟ್‌ ಐ ಅಳ ವಡಿಸುವಿಕೆ, ಅಗತ್ಯವಿರುವ ಕಡೆ ರಸ್ತೆ ಉಬ್ಬುಗಳು, ಡೆಲಿನೇಟರ್‌ ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದ್ದು, ಘಾಟಿ ರಸ್ತೆಯಲ್ಲಿ ಸಂಪೂರ್ಣ ಚೈನೇಜ್‌ ದ್ವಿಮುಖ ರಸ್ತೆ ಅಗಲಕ್ಕೆ ವ್ಯವಸ್ಥೆಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಮಗಾರಿ ಬಹುತೇಕ ಪೂರ್ಣಗೊಂಡಿರುವುದರಿಂದ ಎಲ್ಲ ರೀತಿಯ ವಾಹನಗಳಿಗೆ ಅನುವು ಮಾಡಿ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು