Thursday, April 3, 2025
ಜಿಲ್ಲೆಬೆಂಗಳೂರುಸಿನಿಮಾಸುದ್ದಿ

ಎರಡನೇ ಮದುವೆ ಸಂಭ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್-ಕಹಳೆ ನ್ಯೂಸ್

ಸ್ಯಾಂಡಲ್‌ವುಡ್‌ನ ಚೆಂದದ ನಿರೂಪಕಿ ಚೈತ್ರಾ ವಾಸುದೇವನ್ ಇದೀಗ ಎರಡನೇ ಮದುವೆ ಸಂಭ್ರಮದಲ್ಲಿದ್ದಾರೆ. ಕಳೆದ ತಿಂಗಳಷ್ಟೇ ಜಗದೀಪ್‌ ಎಂಬುವವರ ಜತೆಗೆ ಎರಡನೇ ಮದುವೆ ಆಗುವ ಬಗ್ಗೆ ಪೋಟೋ ಶೇರ್‌ ಮಾಡಿ, ಭಾವಿ ಪತಿಯನ್ನು ಪರಿಚಯಿಸಿದ್ದರು ಚೈತ್ರಾ. ಇದೀಗ ಸದ್ದಿಲ್ಲದೆ ಮದರಂಗಿ ಶಾಸ್ತ್ರ ಮುಗಿಸಿಕೊಂಡಿದ್ದಾರೆ.

ತಮ್ಮ ನಿರೂಪಣೆಯಿಂದಲೇ ಕನ್ನಡಿಗರ ಮತ್ತು ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ಚೈತ್ರಾ ವಾಸುದೇವನ್‌, ಎರಡನೇ ಮದುವೆಯ ಸಂಭ್ರಮದಲ್ಲಿದ್ದಾರೆ. ಮೆಹಂದಿ ಶಾಸ್ತ್ರದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

2023ರಲ್ಲಿ ಮೊದಲ ಪತಿ ಸತ್ಯ ನಾಯ್ಡುಗೆ ವಿಚ್ಛೇದನ ನೀಡಿ ಆ ಬಂಧದಿಂದ ಹೊರಬಂದಿದ್ದ ಚೈತ್ರಾ, ಕಳೆದ ವರ್ಷವೇ ಎರಡನೇ ಮದುವೆ ಬಗ್ಗೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಶೋನಲ್ಲಿ ಹೇಳಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅದಾದ ಮೇಲೆ ಜನವರಿಯಲ್ಲಿ ಭಾವಿ ಪತಿ ಜಗದೀಪ್‌ ಎಂಬುವವರ ಜತೆಗೆ ಪ್ಯಾರಿಸ್‌ನಲ್ಲಿ ಉಂಗುರು ಬದಲಿಸಿಕೊಂಡು, ಸಂಭ್ರಮಿಸಿದ್ದರು ಚೈತ್ರಾ. ಆದರೆ, ಆ ಹುಡುಗ ಯಾರೆಂಬ ಸುಳಿವು ಬಿಟ್ಟುಕೊಟ್ಟಿರಲಿಲ್ಲ.

ಫೆಬ್ರವರಿಯಲ್ಲಿ ದೇವರ ಸನ್ನಿಧಿಯಲ್ಲಿ ಎರಡನೇ ಮದುವೆ ಆಗುವ ಹುಡುಗನನ್ನು ಪರಿಚಯಿಸಿದ್ದರು. ಇದೀಗ ಅದೇ ಹುಡುಗನ ಜತೆಗೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ.
ಅದರಂತೆ, ಇದೀಗ ಚೈತ್ರಾ ಮನೆಯಲ್ಲಿ ಮದುವೆ ಸಂಭ್ರಮಗಳು ಜೋರಾಗಿ ನಡೆಯುತ್ತಿದ್ದು, ಮೊದಲಿಗೆ ಮೆಹಂದಿ ಶಾಸ್ತ್ರ ನೆರವೇರಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ