
ವಿರಾಟ್ ಕೊಹ್ಲಿ ಅವರು ಭಾನುವಾರ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದರೆ ‘ತ್ರಿಶತಕ’ ಪೂರೈಸಲಿದ್ದಾರೆ. ಈ ಪಂದ್ಯವು ಕೊಹ್ಲಿಗೆ 300ನೇ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈಚೆಗೆ ನಡೆದ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಅವರು ಶತಕ ಗಳಿಸಿದ್ದರು.
ಅದರೊಂದಿಗೆ ತಮ್ಮ ಲಯಕ್ಕೆ ಮರಳಿದ್ದರು. 300ನೇ ಪಂದ್ಯದಲ್ಲಿಯೂ ಅವರು ಮತ್ತೊಂದು ಶತಕ ಸಿಡಿಸುವರೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಗರಿಗೆದರಿದೆ. ಈ ಸಾಧನೆ ಮಾಡಲಿರುವ ಭಾರತದ ಏಳನೇ ಬ್ಯಾಟರ್ ಅವರಾಗಿದ್ದಾರೆ. 2008ರಲ್ಲಿ ದಂಬುಲಾದಲ್ಲಿ ಶ್ರೀಲಂಕಾ ಎದುರು ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.