Friday, April 11, 2025
ಸುದ್ದಿ

ನೀರಿನ ವಿಚಾರ ಬಂದಾಗ ಎಲ್ಲ ಕಲಾವಿದರೂ ಬೆಂಬಲಿಸಬೇಕು: ನಟಿ ರಮ್ಯಾ – ಕಹಳೆ ನ್ಯೂಸ್

ವಿಜಯನಗರ:  ಸಾಹೇಬ್ರು ಹೇಳಿರೋದರಲ್ಲಿ ತಪ್ಪಿಲ್ಲ, ನೀರಿನ ವಿಚಾರ ಬಂದಾಗ ಎಲ್ಲ ಕಲಾವಿದರೂ ಬೆಂಬಲಿಸಬೇಕು. ಡಾ.ರಾಜ್ ಕುಮಾರ್ ಅವರು ನೆಲ, ಜಲ, ಭಾಷೆ ವಿಚಾರದಲ್ಲಿ ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕದ ನದಿಗಳು, ಜಲಾಶಯಗಳ ಬಗ್ಗೆಯೂ ಕಲಾವಿದರು ಮಾತನಾಡಬೇಕು ಎಂದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಡಿಕೆಶಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಹಂಪಿಯಲ್ಲಿ ಮಾತನಾಡಿದ ಅವರು, ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡುತ್ತೇನೆ ಎಂದು ಡಿಸಿಎಂ ಡಿಕೆಶಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮ್ಯಾ,  ಅವರ ಹೇಳಿಕೆಗೆ ನನ್ನ ಸಹಮತವಿದೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯ ನನಗೆ ಯಾವುದೇ ಹೊಸ ಚಿತ್ರಗಳಿಲ್ಲ, ಯೋಜನೆಗಳಿಲ್ಲ, ಸಚಿವ ಜಮೀರ್ ಅಹ್ಮದ್ ಅವರು ಮತ್ತು ವಿಜಯನಗರ ಜಿಲ್ಲಾಡಳಿತ ನನಗೆ ಆಹ್ವಾನ ನೀಡಿದ್ದರು. ಹಾಗಾಗಿ ಬಂದಿದ್ದೇನೆ, ಖುಷಿ ಆಯ್ತು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ