ಉಚಿತ ರಕ್ತದ ಒತ್ತಡ, ರಕ್ತಪರೀಕ್ಷೆ ಹಾಗೂ ಆರೋಗ್ಯ ಮಾಹಿತಿ,ಯೋಗ ತರಬೇತಿ ಶಿಬಿರ -ಕಹಳೆ ನ್ಯೂಸ್

ಬಂಟ್ವಾಳ : ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು. ಸಂಶೋಧನಾ ಸಂಸ್ಥೆ (ರಿ ) ಬಾಳ್ತಿಲ ಮತ್ತು ವಾತ್ಸಲ್ಯ ಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಮಹಿಳಾ ಮಂಡಲ ಮಂಚಿ ಕುಕ್ಕಾಜೆ ವತಿಯಿಂದ ಮಂಚಿ ಕುಕ್ಕಾಜೆ ಸರಕಾರಿ ಪ್ರೌಢ ಶಾಲೆಯಲ್ಲಿ ಉಚಿತ ರಕ್ತದ ಒತ್ತಡ ರಕ್ತಪರೀಕ್ಷೆ, ಆರೋಗ್ಯ ಮಾಹಿತಿ , ಯೋಗ ತರಬೇತಿ ಶಿಬಿರ ಜರಗಿತು
ಆರೋಗ್ಯ ಸಂಬಂಧ ವೈದ್ಯಕೀಯ ಮಾಹಿತಿಯನ್ನು ಡಾ. ಚೇತನಾ ಗಣೇಶ್, ಉಚಿತ ರಕ್ತದ ಒತ್ತಡ ರಕ್ತಪರೀಕ್ಷೆ ಆರೋಗ್ಯ ತಪಾಸಣೆ ಯನ್ನು ಸ್ವಾತಿ ಕ್ಲಿನಿಕ್ ಸೂರಿಕುಮೇರುನ ಡಾ. ರಾಜೇಶ್ ಪೂಜಾರಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು. ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು ನ್ಯಾಯವಾದಿಗಳು ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ಶೈಲಜಾ ರಾಜೇಶ್,
ಪ್ರೌಢಶಾಲಾ ಮುಖ್ಯ ಶಿಕ್ಷಕ ಅಶೋಕ್, ಮಹಿಳಾ ಮಂಡಲದ ಮಾಜಿ ಅಧ್ಯಕ್ಷ ಭಗೀರತಿ,
ಸದಸ್ಯರಾದ ಸುಜಾತ ದಿನೇಶ್,ಜಯಂತಿ ಇಂದಿರಾ, ಗೋಪಾಲ್. ವಿಲ್ಮಪಾಯಸ್,ಗೀತಾ ,ಲವೀನಾ. ಉಪಸ್ಥಿತರಿದ್ದರು.