ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಪ್ರತಿ ಲೀ. ಪೆಟ್ರೋಲ್ ಬೆಲೆ 15 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ದರ 10 ಪೈಸೆ ಕಡಿತಗೊಂಡಿದೆ. ಹಾಗಾಗಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್, ಡೀಸೆಲ್ ಕ್ರಮವಾಗಿ 77.28 ರೂ., 72.09 ರೂ.ಗೆ ಮಾರಾಟಗೊಳ್ಳುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಸತತವಾಗಿ ಇಳಿಕೆಯಾಗುತ್ತಿದ್ದು, ರಾಷ್ಟ್ರದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕಂಡಿದೆ. ಹಾಗೆಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಪ್ರತಿ ಲೀ. ಪೆಟ್ರೋಲ್ 77.90 ರೂ.ಗೆ ಮತ್ತು ಡೀಸೆಲ್ 72.48 ಪೈಸೆಗೆ ಮಾರಾಟಗೊಳ್ಳುತ್ತಿದೆ.
ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ 82.80 ರೂ. ಮತ್ತು ಡೀಸೆಲ್ 75.53 ರೂ.ಗೆ ಮಾರಾಟಗೊಳ್ಳುತ್ತಿದ್ದು, ತೈಲ ದರ ಸತತವಾಗಿ ಕುಸಿಯುತ್ತಿರುವುದು ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ.