Friday, September 20, 2024
ಸುದ್ದಿ

ವಧೆಗಾಗಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ: ಆರೋಪಿತರ ಮೇಲೆ ಕ್ರಮ – ಕಹಳೆ ನ್ಯೂಸ್

ವಿಟ್ಲ: ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಲೆತ್ತೂರು ಮಾರ್ಗವಾಗಿ ಕೇರಳ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಮೇರೆಗೆ ಯಲ್ಲಪ್ಪ ಎಸ್ ಪಿಎಸ್ ಐ ವಿಟ್ಲ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ಪಂಚರ ಸಮಕ್ಷಮಾ ಸಮಯ ಸುಮಾರು 6.45 ಗಂಟೆಗೆ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಸೇತುವೆ ಬಳಿ ಸಾಲೆತ್ತೂರು ಕಡೆಯಿಂದ ಬರುತ್ತಿರುವ ಕೆ ಎ 21 ಬಿ  7341 ನೇ ಮಹಿಂದ್ರ ಜೀತೋ ವಾಹನವನ್ನು ನಿಲ್ಲಿಸಿದರು.

ಒಂದು ದೊಡ್ಡ ಗ್ರಾತ್ರದ ಹಸುವನ್ನು ಆಚೆ ಈಚೆ ತಿರುಗಾಡದಂತೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿದ್ದು ಆರೋಪಿತರಾದ ಪ್ರವೀಣ್ ನಾಯಕ್ (28) ತಂದೆ: ಬಾಲಕೃಷ್ಣ ನಾಯಕ್ ವಾಸ: ಅರ್ಬಿ ಮನೆ ಕೊಡಿಂಬಾಡಿ ಗ್ರಾಮ ಪುತ್ತೂರು ತಾಲೂಕು ಮತ್ತು ಜಗದೀಶ ಹೆಗಡೆ (32) ತಂದೆ: ಹರಿಶ್ಚಂದ್ರ ಹೆಗಡೆ ವಾಸ: ಬೆರಿಕೆ ಮನೆ ಪಡ್ನೂರು ಗ್ರಾಮ ಪುತ್ತೂರು ತಾಲೂಕು ರವರನ್ನು ವಶಕ್ಕೆ ಪಡೆದುಕೊಂಡಿದ್ದು, ಹಸುವಿನ ಅಂದಾಜು ಮೌಲ್ಯ 15000/- ರೂಪಾಯಿ ಮತ್ತು ಕೆ ಎ 21 ಬಿ 7341 ನೇ ಜೀತೋ ವಾಹನದ ಮೌಲ್ಯ 1.50000/- ರೂಪಾಯಿಯಾಗಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿತ ಯಾವುದೇ ಪರವಾನಿಗೆ ಇಲ್ಲದೆ ಸರಕು ಸಾಗಾಟ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿ ಹಸುವನ್ನು ವಧೆಗಾಗಿ ಸಾಗಾಟ ಮಾಡಿರುವುದರಿಂದ ಆರೋಪಿತರ ಮೇಲೆ ಸ್ವ-ಪಿರ್ಯಾದು ತಯಾರಿಸಿ ವಿಟ್ಲ ಪೊಲೀಸ್ ಠಾಣಾ ಅ.ಕ್ರ ನಂ 278/2018 ಕಲಂ 4, 5 (1) ಜೊತೆಗೆ 11 ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ ಮತ್ತು ಕಲಂ 8,11 (1) (ಡಿ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ಹಾಗೂ ಕಲಂ 66 ಜೊತೆಗೆ 192 (ಎ) ಐ ಯಂ ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

ಜಾಹೀರಾತು