Saturday, November 16, 2024
ಸುದ್ದಿ

ಭಾರತ ಬಿಟ್ಟು ತೊಲಗು | ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗರಂ.

ದೆಹಲಿ : ಮುಂಬೈ ಭಯೋತ್ಪಾದಕ ದಾಳಿ ಬಗ್ಗೆ ಕೆಂಡಾಮಂಡಲವಾಗಿದ್ದ ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಪಾಕಿಸ್ತಾನದ ಸಚಿವ ಶಾ ಮಹ್ಮೂದ್ ಖುರೇಶಿಗೆ ಫೋನ್ ಕರೆ ಮಾಡಿ ಕೂಡಲೇ ಭಾರತದಿಂದ ತೆರಳುವಂತೆ ತಿಳಿಸಿದ್ದರು ಎಂದು ಪ್ರಣವ್ ಮುಖರ್ಜಿ ಅವರ ಆತ್ಮಹಚರಿತ್ರೆಯ ಮೂರನೇ ಸಂಪುಟ “ದಿ ಕೊಲೀಶನ್ ಇಯರ್ಸ್‌ 1996-2012″ರಲ್ಲಿ ಬರೆಯಲಾಗಿದೆ‌.

ಶುಕ್ರವಾರ ಬಿಡುಗಡೆಗೊಂಡ ಈ ಪುಸ್ತಕದಲ್ಲಿ ಖುರೇಶಿ ಅವರನ್ನು ಪಾಕಿಸ್ತಾನಕ್ಕೆ ಕರೆದು ಕೊಂಡುಹೋಗಲು ತನ್ನ ಹೆಲಿಕಾಪ್ಟರ್ ನೀಡುವುದಾಗಿ ಪ್ರಣವ್ ಮುಖರ್ಜಿ ಹೇಳಿದ್ದರು ಎಂದು ಬರೆಯಲಾಗಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬದ ಉಗ್ರರು ಮುಂಬೈಯಲ್ಲಿ ನಡೆಸಿದ ದಾಳಿಯಲ್ಲಿ ಕನಿಷ್ಠ 162 ಮಂದಿ ಮೃತಪಟ್ಟು 300 ಮಂದಿ ಗಾಯಗೊಂಡಿದ್ದರು. ಉಗ್ರರಲ್ಲಿ ಓರ್ವನಾದ ಅಜ್ಮಲ್ ಕಸಬ್ ಅನ್ನು ಪೊಲೀಸರು ಬಂಧಿಸಿದ್ದರು.
ನವೆಂಬರ್ 26 ರಂದು ದಾಳಿ ಆರಂಭವಾದ ಬಳಿಕ ಮುಖರ್ಜಿ ಅವರು ಪತ್ರಿಕಾಗೋಷ್ಠಿಯಲ್ಲಿದ್ದ ತನ್ನ ಸಹೋದ್ಯೋಗಿ ಖುರೇಶಿಗೆ ಮಾಹಿತಿ ನೀಡಿದ್ದರು. ತಮಗೆ ಪರಿಚಯವಿದ್ದ ಪತ್ರಕರ್ತರೊಬ್ಬರ ಮೂಲಕ ಖುರೇಶಿಯ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿದ್ದ ಅವರು, ಕೂಡಲೇ ತನ್ನೊಂದಿಗೆ ಮಾತನಾಡುವಂತೆ ಖುರೇಶಿಗೆ ತಿಳಿಸುವಂತೆ ಹೇಳಿದ್ದರು.
ಖುರೇಶಿ ಫೋನ್ ಮಾಡಿದಾಗ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಿದ್ಧಪಡಿಸಿದ್ದ ಟಿಪ್ಪಣಿಯನ್ನು ಅವರು ಓದಿದ್ದರು.
ಸಚಿವರೇ, ಪ್ರಸಕ್ತ ಸನ್ನಿವೇಶದಲ್ಲಿ ನೀವು ಭಾರತದಲ್ಲಿ ನೆಲೆಸುವುದರಿಂದ ಯಾವುದೇ ಉದ್ದೇಶ ಈಡೇರಲಾರದು. ಕೂಡಲೇ ದೇಶ ಬೀಡಿ ಎಂದು ನಾನು ಸಲಹೆ ನೀಡುತ್ತೇನೆ. ನಿಮ್ಮನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸಲು ನನ್ನ ಹೆಲಿಕಾಪ್ಟರ್ ಲಭ್ಯವಿದೆ. ನೀವು ತ್ವರಿತವಾಗಿ ನಿರ್ಧಾರ ತೆಗೆದುಕೊಂಡರೆ ಯೋಗ್ಯ ಎಂದು ಮುಖರ್ಜಿ ಅವರು ಟಿಪ್ಪಣಿಯಲ್ಲಿ ಹೇಳಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response