Tuesday, April 8, 2025
ಉಡುಪಿಕಾಪುಜಿಲ್ಲೆಸುದ್ದಿ

ನಮ್ಮ ವಯೋ ವೃದ್ದಾ ಹಿರಿಯ ನಾಗರೀಕ ರೆಂದರೆ ರೋಗಿ ಗಳಲ್ಲ ಯಾರಿಗೂ ಪ್ರಯೋಜನ ವಿಲ್ಲದ ನಿಸ್ ಪ್ರಯೋಜ ಕರಲ್ಲ, ಅವರನ್ನು ಗೌರವಿಸಿ-ಕಾಪು ತಾಲೂಕು ತಹಸೀಲ್ದಾರ್- ಕಹಳೆ ನ್ಯೂಸ್

ಕಾಪು : ನಮ್ಮ ವಯೋ ವೃದ್ದಾ ಹಿರಿಯ ನಾಗರೀಕ ರೆಂದರೆ ರೋಗಿ ಗಳಲ್ಲ ಯಾರಿಗೂ ಪ್ರಯೋಜನ ವಿಲ್ಲದ ನಿಸ್ ಪ್ರಯೋಜ ಕರಲ್ಲ, ಅವರನ್ನು ಗೌರವಿಸಿ, ಅವರಿಗೆ ಪ್ರೀತಿ ನೀಡಿ , ಅವರು ಜ್ಞಾನ ದ ಬಂಡಾರ, ಸಂಸ್ಕೃತಿ ಮತ್ತು ಪೃಕ್ರತಿ ಯನ್ನು ಪಾಲನೆ ಮಾಡಿ ನಮ್ಮ ಬದುಕಿನ ಆಶ್ರದಾತರು ಅವರಿಗೆ ಆಸರೆ ನೀಡಿ ಪ್ರೀತಿ ಯಿಂದ ಅವರ ಸಂರಕ್ಷಣೆ ಮಾಡಿ ಅವರಿಗೆ ಯಾವುದೇ ತೊಂದರೆ ಆಗ ದಂತೆ ನೋಡಿಕೊಳ್ಳಬೇಕು ಎಂದು ಕಾಪು ತಾಲೂಕು ತಹಸೀಲ್ದಾರ್ ಡಾ ಪ್ರತಿಭಾ ಆರ್ ಹೇಳಿದರು.

ಅವರು ಕಾಪುತಾಲೂಕ್ ಹಿರಿಯ ನಾಗರೀಕ ರ ಸಮಸ್ಯೆ ಗಳ ಬಗ್ಗೆ ಪರಿಶೀಲನೆ ನಡೆಸಲು ಹಿರಿಯ ನಾಗರೀಕ ರ ಆಶ್ರಮ ಮತ್ತು ಗ್ರಾಮಒನ್ ಕಚೇರಿ ಗಳಿಗೆ ಬೇಟಿ ನೀಡಿ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಇನ್ನಿತರ ದಾಖಲೆ ಗಳ ತೊಂದರೆ ಯಿಂದ ಸರಕಾರ ದ ಅನೇಕ ಯೋಜನೆ ಪಡೆಯುವ ಲ್ಲಿ (ಆಯುಷ್ಮಾನ್, ಸಂದ್ಯಾ ಸುರಕ್ಷಾ, ) ಸಮಸ್ಯೆ ಯಾಗುತ್ತಿದ್ದೂ ಪರಿಶೀಲನೆ ನಡೆಸಿದರು ಈ ಬಗ್ಗೆ ಪರಿಹಾರ ಕೈಗೊಳ್ಳುವಲ್ಲಿ ತನ್ನ ತಾಲೂಕಿನ ಸಮ್ಮಂದ ಪಟ್ಟ ಅಧಿಕಾರಿ ಗಳೊಂದಿಗೆ ಚರ್ಚಿ ಸಿ ಹಿರಿಯ ನಾಗರೀಕ ರಿಗೆ ಯಾವುದೇ ತೊಂದರೆ ಆಗ ದಂತೆ ಸ್ಪಂದಿಸಿ ಎಂದು ಸೂಚನೆ ನೀಡಿದರು, ಮಾನವೀಯ ದೃಷ್ಟಿಯಿಂದ ನೋಡಿದಾಗ ಪ್ರತಿಯೊಂದು ಸಮಸ್ಯೆಗೂ ಪರಿಹಾರ ದೊರಕುತ್ತದೆ”
ಪಡಿತರ ಅಂಗಡಿಯಲ್ಲಿ ಅಕ್ಕಿ ಪಡೆಯಬೇಕಾದರೆ ಹೆಬ್ಬೆಟ್ಟು ಒತ್ತುವುದು ಕಡ್ಡಾಯವಾಗಿದೆ. ಆದರೆ ಹಾಸಿಗೆ ಹಿಡಿದ ರೋಗಿಗಳಿಗೆ, ವೃದ್ಧರಿಗೆ ಪಡಿತರ ಅಂಗಡಿಗೆ ಬರುವುದು ಅಸಾಧ್ಯವಾಗಿರುತ್ತದೆ. ಅಂತಹವರಿಗೆ ತಹಶಿಲ್ದಾರ್ ರವರ ನಿರ್ದೇಶನದ ಮೇರೆಗೆ ಹೆಬ್ಬೆಟ್ಟು ಒತ್ತುವುದರಿಂದ ವಿನಾಯಿತಿ ನೀಡಿ ಹಾಗೆಯೇ ಪಡಿತರ ಪಡೆಯುವ ವ್ಯವಸ್ಥೆ ಮಾಡಲು ಸಾಧ್ಯವಿದೆ. ಅಂತಹವರು ಇದ್ದರೆ ನೇರವಾಗಿ ತಹಶಿಲ್ದಾರ್ ರವರ ಗಮನಕ್ಕೆ ತಂದರೆ ಅಂತವರಿಗೆ ಸಹಾಯ ಮಾಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲಾ ವಿಷಯಗಳಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಆ ಸಮಸ್ಯೆಗೆ ಪರಿಹಾರ ಹುಡುಕಬೇಕಾದ ಜಾಣತನ ಅಧಿಕಾರಿಗಳಿಗಿರಬೇಕು. ಜೊತೆಗೆ ನೊಂದವರ ಕಣ್ಣೀರು ಒರೆಸುವ ಮನಸ್ಥಿತಿಯೂ ಇದ್ದಾಗ ಖಂಡಿತ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸಾಧ್ಯ ಎಂದು ತಹಶಿಲ್ದಾರ್ ಪ್ರತಿಭಾ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ತಾಲೂಕಿನ ಯಾವುದೇ ಹಿರಿಯ ನಾಗರಿಕರು ಸಮಸ್ಯೆ ಗಳಿದ್ದಲ್ಲಿ ತನ್ನ ಕಚೇರಿ ಯನ್ನು ಸಂಪರ್ಕಿ ಸುವಂತೆ ಮನವಿ ಮಾಡಿದರು ಇತ್ತೀಚಿನ ದಿನಗಳಲ್ಲಿ ನಾವು ಆದುನಿಕ ಜೀವನ ನಡೆಸುತ್ತಿದ್ದೂ ನಮ್ಮ ಹಿರಿಯ ರ ಬಗ್ಗೆ ಗಮನ ಹರಿಸುವಲ್ಲಿ ಅಲಸ್ಯ ತೋರುತ್ತಿದ್ದೂ ಪ್ರತಿ ದಿನ ಅನೇಕ ಸಮಸ್ಯೆ ಹೆಚ್ಚಾಗುತ್ತಿದ್ದೂ ನಾಗರೀಕ ಸಮಾಜದ ಜವಾಬ್ದಾರಿ ಯನ್ನು ನಿಭಾಯಿಸ ಬೇಕಾದ ನಾವು ಎಲ್ಲರೂ ವಂದಾಗಿ ದುಡಿಯೋಣ ಸುಂದರ ಸಮಾಜ ಕಟ್ಟೋಣ, ನೆಮ್ಮದಿ ಯ ಬದುಕು ಬದುಕೋಣ ಎಂದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ