Thursday, April 17, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಸಂಪೂರ್ಣ ಮಹಿಳಾ ಸಿಬ್ಬಂದಿಯೊಂದಿಗೆ ಹಾರಾಟ ನಡೆಸಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್- ಕಹಳೆ ನ್ಯೂಸ್

ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮಂಗಳೂರು-ಮಸ್ಕತ್ ವಿಮಾನ ಪೂರ್ಣ ಮಹಿಳಾ ಸಿಬ್ಬಂದಿಯೊಂದಿಗೆ ಹಾರಾಟ ನಡೆಸಿತು.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಒಟ್ಟು 14 ಪೂರ್ಣ-ಮಹಿಳಾ ವಿಮಾನಗಳು ಕಾರ್ಯಾಚರಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರಿನಿಂದ ವಾರಕ್ಕೆ 70 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿದ್ದು, ನಗರವನ್ನು 4 ದೇಶೀಯ ಮತ್ತು 8 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳಾ ದಿನಾಚರಣೆ ಅಂಗವಾಗಿ ಏರ್‌ ಇಂಡಿಯಾ ಎಕ್ಸ್‌ ಪ್ರೆಸ್‌ ವಿಶೇಷ ಯೋಜನೆ ರೂಪಿಸಿದೆ. ಪೂರ್ಣ ಮಹಿಳಾ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸಿದ ತಾಣಗಳಲ್ಲಿ ಅತಿ ಉದ್ದದ ಮಾರ್ಗಗಳಲ್ಲಿ ಒಂದಾದ ಮೆಲ್ಬೋರ್ನ್ ಕೂಡಾ ಸೇರಿದೆ. ಲಂಡನ್ ಹೀಥ್ರೂ, ದಮ್ಮಾಮ್, ಮಸ್ಕತ್, ರಾಸ್ ಅಲ್ ಖೈಮಾ, ಅಬುಧಾಬಿ, ವಾರಣಾಸಿ, ಪುಣೆ, ವಿಶಾಖಪಟ್ಟಣಂ, ಕೋಲ್ಕತ್ತಾ, ಬಾಗ್ಡೋಗ್ರಾ, ಭುವನೇಶ್ವರ, ವಿಜಯವಾಡ ಮತ್ತು ಗುವಾಹಟಿಗಳಿಗೆ ಸಂಪರ್ಕಿಸುವ ವಿಮಾನಗಳ ಹಾರಾಟ ಈ ಯೋಜನೆಯಡಿಯಲ್ಲಿ ನಡೆಸಲಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ