
ಮಣಿಪಾಲ: ಈಶ್ವರ ನಗರ ನೀರಿನ ಟ್ಯಾಂಕ್ ಬಳಿ ಕಾರು ಅಪಘಾತವಾದ ಘಟನೆ ಮಾ.8ರ ಶನಿವಾರ ತಡರಾತ್ರಿ ಸುಮಾರು 1.30 ಗಂಟೆಗೆ ಸಂಭವಿಸಿದೆ.
ಕಾರು ಹೆದ್ದಾರಿಯಿಂದ ಜಿಗಿದು ಪಲ್ಟಿ ಹೊಡೆದಿದ್ದು, ಈ ಕಾರಿನಲ್ಲಿ ಹಲವು ನಂಬರ್ ಪ್ಲೇಟ್ ಗಳಿದ್ದವು. ಅಪಘಾತವಾದ ತತ್ ಕ್ಷಣ ಕಾರಿನೊಳಗಿದ್ದ ವ್ಯಕ್ತಿಗಳು ವಿವಿಧ ನೊಂದಣಿ ಸಂಖ್ಯೆಗಳುಳ್ಳ ನಂಬರ್ ಪ್ಲೇಟ್ ಗಳನ್ನು ಪೊದೆಗೆ ಎಸೆದು ಹೋಗಿದ್ದಾರೆ.
ಘಟನೆಯ ಪರಿಣಾಮ ಓರ್ವ ವ್ಯಕ್ತಿಗೆ ಮಾತ್ರ ಗಾಯವಾಗಿದ್ದು, ಜೊತೆಗಿದ್ದವರು ಆತನನ್ನು ಉಪಚರಿಸುವ ಗೋಜಿಗೆ ಹೋಗಿಲ್ಲ. ಬದಲಾಗಿ ಕಾರಿನೊಳಗಿದ್ದ ವಸ್ತುಗಳನ್ನು (ಸಂಶಯಾಸ್ಪದ) ತೆಗೆದುಕೊಂಡು ಹೋಗುವ ಧಾವಂತದಲ್ಲಿದ್ದರು.
ಗಾಯಗೊಂಡ ವ್ಯಕ್ತಿಯನ್ನು ಅಲ್ಲಿ ಸೇರಿದ ಸಾರ್ವಜನಿಕರೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.