ಮಹಮ್ಮಾಯಿ ಸೇವಾ ಸಮಿತಿ ದಿಂಡಿಕೆರೆ ಇದರ ನೂತನ ಅಧ್ಯಕ್ಷರಾಗಿ ಚೇತನ್ ಏಲಬೆ ಆಯ್ಕೆ -ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಹಮ್ಮಾಯಿ ಸೇವಾ ಸಮಿತಿ ದಿಂಡಿಕೆರೆ ಇದರ ನೂತನ ಅಧ್ಯಕ್ಷರಾಗಿ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಏಲಬೆ ಆಯ್ಕೆಯಾದರು.
ದಿಂಡಿಕೆರೆ ಸಂಘದ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಿತಿನ್ ಏಲಬೆ, ಕಾರ್ಯದರ್ಶಿಯಾಗಿ ಅಖಿಲಾಷ್ ದಿಂಡಿಕೆರೆ, ಜೊತೆ ಕಾರ್ಯದರ್ಶಿಯಾಗಿ ದುರ್ಗೇಶ್ ಏಲಬೆ, ಕೋಶಾಧಿಕಾರಿಯಾಗಿ ನಾಗೇಶ್ ಏಲಬೆ, ಗೌರವಾಧ್ಯಕ್ಷರಾಗಿ ಶಿವಪ್ಪ ಏಲಬೆ ಆಯ್ಕೆ ಆಗಿರುತ್ತಾರೆ.