Sunday, March 30, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು:ನಾರಿಯರ ಮನಸೆಳೆದ ವೈವಿಧ್ಯಮಯ ಸೀರೆ ಪ್ರದರ್ಶನ-ಕಹಳೆ ನ್ಯೂಸ್

ಮಂಗಳೂರು: ಮಾರ್ಚ್ ತಿಂಗಳು ಬಂತೆಂದರೆ  ಸಾಕು ಎಲ್ಲಾ ಕಡೆಗಳಲ್ಲೂ ಮಹಿಳಾ ದಿನಾಚರಣೆಯ ಸಂಭ್ರಮ ಮನೆ ಮಾಡಿರುತ್ತದೆ. ಮಹಿಳೆಯರಿಗೆ ಉಡುಪುಗಳ ಮೇಲೆ ಎಲ್ಲಿಲ್ಲದ ವ್ಯಾಮೋಹ. ವಿಭಿನ್ನವಾದ ಹಾಗೂ ವೈವಿಧ್ಯಮಯ ಉಡುಗೆ-ತೊಡುಗೆ ತೊಟ್ಟು ಸಂಭ್ರಮಿಸುವುದನ್ನು ನೋಡುವುದೇ ಒಂದು ಹಬ್ಬ. ಅದರಲ್ಲೂ ಭಾರತೀಯ ಮಹಿಳೆಯ ಅತ್ಯಂತ ವಿಭಿನ್ನ ಹಾಗೂ ವಿಶಿಷ್ಟವಾದ ಉಡುಗೆಯ ಸಾಲಿನಲ್ಲಿ ಮೊದಲು ನಿಲ್ಲುವುದೇ ಸೀರೆ. ಸೀರೆ ಎಂದರೆ ಸಾಕು ಮಹಿಳಾಮಣಿಗಳಿಗೆ ಎಲ್ಲಿಲ್ಲದ ಸುಗ್ಗಿ, ಸಂತೋಷ. ಇದೇ ಕಾರಣಕ್ಕಾಗಿ ಇಲ್ಲಿ ದೇಶದ ವೈವಿಧ್ಯಮಯ ಸೀರೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಗರ್ವಾಲ, ಡೋಲಾ, ಬೆಂಗಾಲಿ ಕಾಟನ್, ರೇಷ್ಮೆ, ಕಾಂಚೀವರA, ಬನಾರಸ್, ಇಳಕಲ್ ಪುಲ್ ಕರಿ, ಘಿಚಾ ಸಿಲ್ಕ್ ಹೀಗೆ ತರಹೇವಾರಿ ಸೀರೆಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ನಮ್ಮ ದೇಶದಲ್ಲಿ ಇಷ್ಟೊಂದು ವೈವಿಧ್ಯಮ ಸೀರೆಗಳಿವೆ ಎಂಬುದನ್ನು ನೋಡಿಯೇ ಕಣ್ಣು ಅರಳುತ್ತಿತ್ತು. ಸೀರೆಗಳ ಪ್ರದರ್ಶನಕ್ಕೆ ಬಂದಿದ್ದವರ ಕಣ್ಣು ತಂಪಾಗಿಸದರೆ, ಮನಸ್ಸು ಅವುಗಳನ್ನು ಕೊಂಡು ಉಟ್ಟು ಸಂಭ್ರಮಿಸುವ ತವಕದಲ್ಲಿತ್ತು. ಹೌದು, ಭಾರತ ಕೇವಲ ಧಾರ್ಮಿಕವಾಗಿ ವೈವಿಧ್ಯಮಯ ದೇಶವಾಗಿರದೇ, ಆಚಾರ-ವಿಚಾರ, ಭಾಷೆ, ಉಡುಗೆ-ತೊಡುಗೆ, ಆಹಾರ ಹಾಗೂ ಭೌಗೋಳಿಕ ಲಕ್ಷಣದಲ್ಲೂ ವೈವಿಧ್ಯಮಯವಾಗಿದೆ. ಇದಕ್ಕೆ ಪೂರಕ ಎಂಬAತೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಭಾರತೀಯ ವೈವಿಧ್ಯಮಯ ಸೀರೆ ಪ್ರದರ್ಶನ ಏರ್ಪಡಿಸಲಾಗಿತ್ತು. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿರುವ
ವರ್ಣಮಯ ಸೀರೆಗಳನ್ನು ಪ್ರದರ್ಶಿಸುವ ಮೂಲಕ ವೈವಿಧ್ಯತೆಯನ್ನು ಪ್ರದರ್ಶಿಸಲಾಯಿತು. ನೆರೆಯ ತೆಲಂಗಾಣ ರಾಜ್ಯದ ಪ್ರಸಿದ್ಧ ಸೀರೆಗಳಲ್ಲಿ ಗರ್ವಾಲ ಸೀರೆ ಕೂಡ ಒಂದಾಗಿದೆ. ಸುಮಾರು ೨೦೦ ವರ್ಷಗಳ ಹಿಂದೆ ಗರ್ವಾಲ ಎಂಬ ಹಳ್ಳಿಯಲ್ಲಿ ಆದಿಲಕ್ಷ್ಮಿಯನ್ನು ಆರಾಧನೆ ಮಾಡುವ ವೇಳೆ ಆಕೆಗೆ ಈ ಸೀರೆಯನ್ನು ಉಡಿಸಿ ಪೂಜೆ ಮಾಡಲಾಗುತ್ತಿತ್ತು ಎನ್ನಲಾಗುತ್ತದೆ. ಹಾಗಾಗಿ ಈ ಗರ್ವಾಲ ಸೀರೆ ಇಂದಿಗೂ ದೇಶದಲ್ಲಿ ಪ್ರಚಲಿತದಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒರಿಸ್ಸಾದ ಡೋಲಾ ಎಂಬ ಬುಡಕಟ್ಟು ಜನಾಂಗದವರು ಡೋಲಾ ಸೀರೆಯನ್ನು ಕೈಯಲ್ಲಿ ನೇಯುತ್ತಿದ್ದರು. ಬನಾನ ಫ್ರೈಬ್ ಎಂಬ ಸೀರೆಯು ಅಸ್ಸಾಂನಲ್ಲಿ ಬಾಳೆ ಗಿಡದ ಎಳೆ ಮೂಲಕ ಬನಾನ ಫ್ರೈಬ್ ಸೀರೆಯನ್ನು ತಯಾರಿಸುತ್ತಿದ್ದರು. ಮುಲ್ಲಾ ಕಾಟನಿ ಎಂಬ ಸೀರೆಯು ಆ ಕಾಲದಲ್ಲಿ ಕೈಯಲ್ಲಿ ತಯಾರಿಸಿದ ನೆಟ್ ಸೀರೆಯಾಗಿದೆ. ಬನಾರಸ್ ಸೀರೆಯು ವಾರಣಾಸಿಯಲ್ಲಿ ಹುಟ್ಟಿ
ಹಾಗೂ ಮೊಘಲರ ಕಾಲದಲ್ಲಿ ಪ್ರಸಿದ್ಧಿಯಾಯಿತು. ಕರ್ನಾಟಕದ ಪ್ರಸಿದ್ಧ ಸೀರೆ ಮೈಸೂರು ಸಿಲ್ಕ್, ಉಡುಪಿಯ ಕಾಟನ್ ಹಾಗೂ ಇಳಕಲ್ ಸೀರೆಯೂ
ಪ್ರದರ್ಶನದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದು ವಿಶೇಷವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜಸ್ಥಾನದ ಕೋಟ, ಕಾಂಚಿಪುರ್, ಜಂದನಿ, ಆಂಧ್ರದ ಕಲಂಕಾರಿ ಇಕ್ಕಟ್ಬ, ಬೆಂಗಾಲಿ ಕಾಟನ್, ಪಂಜಾಬ್‌ನ ಪುಲ್ ಕರಿ, ಘಿಚಾ ಸಿಲ್ಕ್, ಬಿಹಾರದ ಮದುಬನಿ ಮುಂತಾದ ಸೀರೆಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದ್ದವು. ಭಾರತ ದೇಶವು ಎಂದಿಗೂ ಕರಕುಶಲ ಕೆಲಸಗಳಿಗೆ ಹೆಸರುವಾಸಿಯಾದ ದೇಶ. ಭಾರತೀಯರು ಕೌಶಲ್ಯವಂತರು ಹಾಗೂ ಕ್ರಿಯಾಶೀಲರು ಎಂಬುದಕ್ಕೆ ಸಾಕ್ಷಿಯಾಗಿತ್ತು ಈ ಪ್ರದರ್ಶನ. ವಿವಿಧ ರೀತಿಯ ಸೀರೆಗಳನ್ನು ಒಂದೇ ಸ್ಥಳದಲ್ಲಿ ನೋಡಲು ಸಾಧ್ಯವಾಯಿತು. ಈ ಎಲ್ಲಾ ಸೀರೆಗಳಿಗೂ ಒಂದೊAದು ಇತಿಹಾಸವಿದೆ. ಇದು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ  ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಸೀರೆ ಪ್ರದರ್ಶನದ ಕುರಿತು ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಮಹಿಳಾ ದಿನಾಚರಣೆಯ ದಿನದಂದು ಎಲ್ಲಾ ಮಹಿಳೆಯರು ದೇಶದ ವೈವಿಧ್ಯಮಯ ಸೀರೆಗಳನ್ನು ನೋಡಿ ಆನಂದಪಡಲಿ ಹಾಗೂ ಆಧುನಿಕ ವಸ್ತ್ರ ವಿನ್ಯಾಸದ ಪ್ರಭಾವಕ್ಕೆ ಸಿಕ್ಕಿ ಸಾಕಷ್ಟು ಕೈಮಗ್ಗದ ಸೀರೆಗಳು ಅಳಿವನಂಚಿಗೆ ಬಂದಿವೆ. ಬಹುತೇಕ ಕುಶಲಕರ್ಮಿಗಳು ನಷ್ಟದಲ್ಲಿದ್ದಾರೆ. ಈ ಪ್ರದರ್ಶನಗಳ ಮೂಲಕ ಸೀರೆ ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗಲಿ ಹಾಗೂ ಈ ಕ್ಷೇತ್ರದಲ್ಲಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವಲ್ಲಿ
ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಲಿ ಎಂಬ ಕಾರಣಕ್ಕಾಗಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಹಿಳಾ ವೇದಿಕೆಯ ಸಂಚಾಲಕಿ ಡಾ. ಭಾರತಿ ಪ್ರಕಾಶ ತಮ್ಮ ಮನದಾಳದ ಮಾತುಗಳನ್ನುಹಂಚಿಕೊಂಡರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ