Saturday, March 29, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು:ಮಹಿಳಾ ಸಾಂತ್ವನ ಕೇಂದ್ರ ಕಚೇರಿ ಕಟ್ಟಡಕ್ಕೆ ಹೊಸ ರೂಪ-ಕಹಳೆ ನ್ಯೂಸ್

ಪುತ್ತೂರು: ಮಹಿಳಾ ದೂರು ದುಮ್ಮಾನಗಳಿಗೆ ನ್ಯಾಯ ಕಲ್ಪಿಸಲೆಂದು ಇರುವ ಪುತ್ತೂರಿನ ಸಾಂತ್ವನ ಕೇಂದ್ರ ಕಚೇರಿ ಶಿಥಿಲವಾಗಿ ಸಂಪೂರ್ಣ ನೆಲಸಮವಾಗುವ ಭೀತಿಯಲ್ಲಿತ್ತು. ಆ ವೇಳೆ ಶಾಸಕ ಅಶೋಕ್‌ ರೈ ಅವರ ಸೂಚನೆ ಮೇರೆಗೆ ನಗರಸಭೆ ಸ್ವಂತ ನಿಧಿಯಿಂದ 5 ಲಕ್ಷ ರೂ. ಅನುದಾನ ಬಳಸಿ ದುರಸ್ತಿ ಕಾರ್ಯ ನಡೆಸಿತು.

2008ರಲ್ಲಿ ಜನಶಿಕ್ಷಣ ಟ್ರಸ್ಟ್‌ ನಡಿಯಲ್ಲಿ ಕೇಂದ್ರ ಆರಂಭಗೊಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಮಿನಿ ವಿಧಾನಸೌಧದ ಬಳಿಯ ನಗರಸಭೆಯ ಹಳೆಯ ಕಟ್ಟಡದ ಸನಿಹದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಂತ್ವನ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸುವಂತೆ ಮೂರು ವರ್ಷಗಳ ಹಿಂದೆ ನಗರಸಭೆ ಸೂಚಿಸಿತ್ತು. ನಗರಸಭೆಗೆ ಸಂಬಂಧಿಸಿದ ಅಭಿವೃದ್ಧಿ ಕೆಲಸ ಗಳಿಗೆ ಆ ಜಾಗ ಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ತಿಳಿಸಿತ್ತು. ಆದರೆ ಆ ಕಟ್ಟಡ ನೆಲಸಮ ಮಾಡದೆ ಶಿಥಿಲಾವಸ್ಥೆ ತಲುಪಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ದುರಸ್ತಿ ಭಾಗ್ಯ
ನಗರಸಭಾ ಕಟ್ಟಡದಿಂದ ಕೇಂದ್ರವು ತಾ.ಪಂ. ಸಾಮರ್ಥ್ಯ ಸೌಧಕ್ಕೆ ಸ್ಥಳಾಂತರ ಗೊಂಡಿತ್ತು. ಬಳಿಕ ಅಲ್ಲಿಂದ ದರ್ಬೆ ಸಿಡಿಪಿಒ ಕಚೇರಿಗೆ ಸ್ಥಳಾಂತರಗೊಂಡಿತ್ತು. ಮಹಿಳಾ ಸಾಂತ್ವನಕ್ಕೆ ಸಂಬಂಧಿಸಿದ ಚಟುವಟಿಕೆಗಳು ಗೌಪ್ಯ ನೆಲೆಯಲ್ಲಿ ಕಾರ್ಯನಿರ್ವಹಿಸ ಬೇಕಾಗಿರುವುದರಿಂದ ಇರುವ ಸ್ಥಳ ಪ್ರಕ್ರಿಯೆ ಗಳಿಗೆ ಅಷ್ಟು ಸೂಕ್ತವಾದದ್ದು ಅಲ್ಲ. ಮಹಿಳೆಗೆ ತೊಂದರೆಯಾದ ಸಂದರ್ಭದಲ್ಲಿ ಆಪ್ತ ಸಮಾಲೋಚಕರಿಂದ, ಅಧಿಕಾರಿಗಳಿಂದ ಕೌನ್ಸಿಲಿಂಗ್‌, ವಿಚಾರಣೆ ಸೇರಿದಂತೆ ನಾಲ್ಕು ಗೋಡೆಗಳ ಮಧ್ಯೆ ಪ್ರಕ್ರಿಯೆಗಳನ್ನು ನಡೆಸಬೇಕಾಗಿರುವುದರಿಂದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಪ್ರತ್ಯೇಕ ಕಟ್ಟಡ, ಕಚೇರಿಯ ಅನಿವಾರ್ಯತೆ ಇತ್ತು. ಸ್ವಂತ ಕಟ್ಟಡಕ್ಕೆ ಬೇಡಿಕೆ ಇದ್ದರೂ ಅದು ನೆರವೇರಿಲ್ಲ. ಮಹಿಳಾ ಸಾಂತ್ವನ ಕೇಂದ್ರವು ಜನಶಿಕ್ಷಣ ಟ್ರಸ್ಟ್‌ ಮೂಲಕ ನಡೆಯುತ್ತಿರುವುದರಿಂದ ಸರಕಾರದ ದೊಡ್ಡ ಮೊತ್ತದ ಅನುದಾನ ಇರಲಿಲ್ಲ. ಅಲ್ಪ ಅನುದಾನದಲ್ಲಿ ಪ್ರತ್ಯೇಕ ಜಾಗ, ಕಟ್ಟಡ ನಿರ್ಮಾಣ ಸಾಧ್ಯವಿರಲಿಲ್ಲ.

ಕಟ್ಟಡ ಶಿಥಿಲವಾಗಿತ್ತು
ಮಹಿಳಾ ಸಾಂತ್ವನ ಕೇಂದ್ರವು ನಗರಸಭೆಯ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆ ಕಟ್ಟಡ ಶಿಥಿಲಗೊಂಡ ಕಾರಣ ನಗರಸಭೆಯ ಸ್ವಂತ ನಿಧಿಯಿಂದ ಅನುದಾನ ಬಳಸಿ ದುರಸ್ತಿ ಮಾಡಲಾಗುತ್ತಿದೆ.
-ಮಧು ಎಸ್‌. ಮನೋಹರ್‌, ಪೌರಾಯುಕ್ತ, ನಗರಸಭೆ ಪುತ್ತೂರು

ದುರಸ್ತಿ ಕಾರ್ಯ
ಸಾಂತ್ವನ ಕೇಂದ್ರವು ಪ್ರಸ್ತುತ್ತ ಸಿಡಿಪಿಒ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನಗರಸಭೆಯ ಹಳೆ ಕಟ್ಟಡದ ದುರಸ್ತಿ ಕಾರ್ಯ ನಗರಸಭೆ ಮೂಲಕ ನಡೆಯುತ್ತಿದೆ.

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ