ಬಿಸಿಗಾಳಿಯಿಂದ ರಕ್ಷಣೆ ಪಿಲಿಕುಳದ ಪ್ರಾಣಿ-ಪಕ್ಷಿಗಳಿಗೆ ಸ್ಪ್ರಿಂಕ್ಲರ್, ಗೂಡುಗಳಿಗೆ ಫ್ಯಾನ್-ಕಹಳೆ ನ್ಯೂಸ್

ಪಿಲಿಕುಳಕ್ಕೆ ಫಲ್ಗುಣಿ ನದಿಯ ಅದ್ಯಪಾಡಿ ಅಣೆಕಟ್ಟಿನಿಂದ ಶುದ್ಧೀಕರಿಸಿದ ನೀರು ಪೂರೈಕೆಯಾಗುತ್ತದೆ. ಗಿಡ – ಮರಗಳಿಗೆ ಪಾಲಿಕೆಯ ಪಚ್ಚನಾಡಿ ಎಸ್‌ಟಿಪಿಯಿಂದ ನೀರು ಪೂರೈಕೆ ವ್ಯವಸ್ಥೆ ಇದೆ. ಆದರೆ ಎಸ್ ಟಿಪಿಯ ಸಮರ್ಪಕ ನಿರ್ವಹಣೆ ಮಾಡದ ಕಾರಣ, ಸಮಸ್ಯೆಯಾಗುತ್ತಿದ್ದು, ಪಿಲಿಕುಳದ ಟಿಟಿಪಿಯಲ್ಲಿ ಶುದ್ಧೀಕರಿಸಿದ ಬಳಿಕ ಗಿಡ ಮರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗಾಗಿ ಜತೆಗೆ ಎರಡು ಬೋರ್‌ವೆಲ್‌ಗಳೂ ಇವೆ.
ಹೊಂಡಗಳಿಗೆ ನೀರು ಪೂರೈಕೆ
ಪಿಲಿಕುಳದಲ್ಲಿ ಸಾಕಷ್ಟು ಮರಗಳಿದ್ದರೂ ಬಿಸಿಲ ಝಳ ನಗರದಷ್ಟೇ ಇದೆ. ಹೀಗಾಗಿ ಪ್ರಾಣಿಗಳು ಬಳಲುತ್ತವೆ. ಅದರಲ್ಲೂ ಮುಖ್ಯವಾಗಿ ಹುಲಿ, ಸಿಂಹ, ಚಿರತೆ, ಕರಡಿ ಸೇರಿದಂತೆ ದೊಡ್ಡ ಗಾತ್ರದ ಪ್ರಾಣಿಗಳಿಗೆ ಹೆಚ್ಚು ಕಿರಿಕಿರಿ. ಹೀಗಾಗಿ ಪ್ರಾಣಿಗಳಿಗೆ ಮೀಸಲಾದ ನೀರಿನ ಹೊಂಡಗಳಿಗೆ ಹೆಚ್ಚು ನೀರು ಪೂರೈಸಲಾಗುತ್ತಿದೆ.
ಪ್ರಾಣಿಗಳಿಗೆ ಶವರ್ ಬಾತ್
ಪ್ರಾಣಿ – ಪಕ್ಷಿಗಳು ವಾಸವಾಗಿರುವ ಜಾಗದಲ್ಲಿ ಸ್ಪ್ರಿಂಕ್ಲರ್ ಅಳವಡಿಕೆ ಮಾಡಲಾಗಿದೆ. ಕೆಲವು ಹೊತ್ತು ಇದನ್ನು ಚಾಲನೆ ಮಾಡಲಾಗುತ್ತದೆ. ಪ್ರಾಣಿಗಳು ಚಿಮ್ಮುವ ನೀರಿನ ಅಡಿಯಲ್ಲಿ ನಿಂತು ದೇಹವನ್ನು ತಂಪು ಮಾಡಿಕೊಳ್ಳುತ್ತವೆ. ನೀರಾನೆಯ ಹೊಂಡದ ನೀರನ್ನು ಪ್ರತಿ ದಿನವೂ ಬದಲಾಯಿಸಲಾಗುತ್ತದೆ.
ಗೂಡುಗಳಿಗೆ ಫ್ಯಾನ್
ಗೂಡಿನಲ್ಲಿರುವ ಪ್ರಾಣಿಗಳಿಗೆ ಸೆಕೆಯಾಗಬಾರದು ಎನ್ನುವ ನೆಲೆಯಿಂದ ಪೆಡಸ್ಟಲ್ ಫ್ಯಾನ್‌ಗಳನ್ನು ಗೂಡಿನ ಹೊರಗೆ ಇಡಲಾಗಿದೆ. ಮುಖ್ಯವಾಗಿ ಹುಲಿಗಳ ಗೂಡು, ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿ ಕೇಂದ್ರದಲ್ಲೂ ಫ್ಯಾನ್ ಅಳವಡಿಲಾಗಿದೆ. ಮುಂದಿನ ದಿನಗಳಲ್ಲಿ ಕೂಲರ್‌ಗಳನ್ನು ಅಳವಡಿಸುತ್ತಾರಂತೆ.
ಪಿಲಿಕುಳದ ಪ್ರಾಣಿ – ಪಕ್ಷಿಗಳಿಗೆ ನೀರಿನಾಶ್ರಯವನ್ನು ಹೆಚ್ಚಿಸಲಾಗಿದೆ. ಫಲ್ಗುಣಿ ನದಿಯಿಂದ ನಿರಂತರವಾಗಿ ನೀರು ಪೂರೈಕೆಯಾಗುತ್ತಿದ್ದು, ನೀರಿನ ಬೇಡಿಕೆ ಹೆಚ್ಚಾಗಿದೆ. ಪ್ರಾಣಿಗಳನ್ನು ತಂಪಾಗಿರಿಸಲು ಪ್ರತಿ ವರ್ಷದಂತೆ ಈ ಬಾರಿಯೂ ಫ್ಯಾನ್, ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗಿದೆ.