Wednesday, March 26, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಶ್ರಮದಾನದ ಮೂಲಕ ಮಜಿ, ವೀರಕಂಭ ಶಾಲೆಯಲ್ಲಿ ನೂತನ ಮೂತ್ರಾಲಯ ನಿರ್ಮಾಣಕ್ಕೆ ಚಾಲನೆ -ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ಅನುದಾನದಿಂದ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಶ್ರಮದಾನದ ಮೂಲಕ ನೂತನ ಮೂತ್ರಾಲಯ (ಯುರಿನಲ್ಸ್ ) ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ್ ಸಿಂಗೇರಿ, ನಿಕಟಪೂರ್ವ ಅಧ್ಯಕ್ಷರಾದ ಸಂಜೀವ ಮೂಲ್ಯ ಮಜಿ, ಶಾಲಾಬಿವೃದ್ಧಿ ಸಮಿತಿಯ ಸದಸ್ಯರಾದ ಸುಧಾಕರ್ ವೀರಕಂಭ, ವಿಶ್ವನಾಥ್ ಎರ್ಮೆಮಜಲು,ಶೌರ್ಯ ಘಟಕದ ಅಧ್ಯಕ್ಷ ಮಾಧವ ಸಾಲ್ಯಾನ್ ಕುದ್ರೆಬೆಟ್ಟು, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಶೆಟ್ಟಿ,ಕಲ್ಲಡ್ಕ ವಲಯ ಅದ್ಯೆಕ್ಷೆ ತುಳಸಿ, ಶೌರ್ಯ ಘಟಕ ಸಂಯೋಜಕಿ ವಿದ್ಯಾ, ವೀರಕಂಬ ಒಕ್ಕೂಟ ಸೇವಾ ಪ್ರತಿನಿಧಿ ವಿಜಯ, ಶೌರ್ಯ ಘಟಕದ ಸದಸ್ಯರುಗಳಾದ ರಮೇಶ್ ಕುದ್ರೆಬೆಟ್ಟು, ಧನಂಜಯ ಬೊಂಡಲ, ಸಂತೋಷ್ ಬೊಲ್ಪೊಡಿ, ಚಿನ್ನಾ
ಕಲ್ಲಡ್ಕ, ಮೇಸ್ತ್ರಿ ತಿಮ್ಮಪ್ಪ ಗೌಡ ಮಜಿ, ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ