Friday, September 20, 2024
ಸುದ್ದಿ

ಬಿಸಿರೋಡಿನಲ್ಲಿ ಸ್ತ್ರೀ ಶಕ್ತಿ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಟ ಮೇಳ – ಕಹಳೆ ನ್ಯೂಸ್

ಬಂಟ್ವಾಳ: ಮನ್ಯುಷ್ಯ ತನ್ನಲ್ಲಿ ಹುದುಗಿರುವ ಶಕ್ತಿಯನ್ನು ಉಪಯೋಗ ಮಾಡಿದಾಗ ಗುರಿಯನ್ನು ತಲುಪಲು ಸಾಧ್ಯ ಎಂದು ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಹೇಳಿದರು.

ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಮತ್ತು ಬಂಟ್ವಾಳ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ( ರಿ.) ಇದರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ಸ್ತ್ರೀ ಶಕ್ತಿ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಟ ಮೇಳ ಕಾರ್ಯಕ್ರಮವನ್ನು ಬಿಸಿರೋಡಿನ ಸ್ತ್ರೀ ಶಕ್ತಿ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆಯರು ತಯಾರಿಸಿದ ಗ್ರಹಪಯೋಗಿ ವಸ್ತುಗಳ ಗುಣಮಟ್ಟದಲ್ಲಿ ರಾಜಿ ಮಾಡದೆ ಉತ್ತಮವಾಗಿ ಕಾಯ್ದುಕೊಂಡು ಹೋದಾಗ ತನ್ನಷ್ಟಕ್ಕೆ
ಮಾರುಕಟ್ಟೆ ಬರುತ್ತದೆ ಎಂದರು.

ಜಾಹೀರಾತು

ಉತ್ತಮ ಭಾವನೆಯಿಂದ, ಎದೆಗುಂದದೆ ಕೆಲಸವನ್ನು ಮಾಡಲು ಕರೆ ನೀಡಿದರು. ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಪ್ರಯತ್ನ ಗಳ ಮೂಲಕ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ಮನೆಯ ಜವಬ್ದಾರಿ ಯನ್ನು ಮಹಿಳೆಯರು ಸಮಾನಾಗಿ ವಹಿಸಿಕೊಂಡಾಗ ಜೀವನ ಸುಗಮ ಎಂದರು. ಮನೆಯಲ್ಲಿ ನೆಮ್ಮದಿ ಯ ಬದುಕಿಗೆ ಜೊತೆಯಾಗಿ ಸಮಸ್ಯೆ ಗಳನ್ನು ಸಮಾನವಾಗಿ ಹಂಚಿಕೊಳ್ಳಿ ಎಂದರು.

ಮಾತ್ರಸ್ವರೂಪಿಣಿಯಾದ ಮಹಿಳೆಯರು ನಂಬಿಕೆಯ ಗಣಿ, ನಿಸ್ವಾರ್ಥ ಸೇವೆ ಮಹಿಳೆಯರು ಮಾಡುತ್ತಾರೆ. ಸರಕಾರದ ಹೆಚ್ಚಿನ ಯೋಜನೆಗಳು ಫಲಪ್ರದವಾಗಲು ಮಹಿಳೆಯರು ಪ್ರೇರಣೆ ಆಗಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ ಹೇಳಿದರು.

ಸ್ಥಾಯಿ ಸಮಿತಿಯ ಅದ್ಯಕ್ಷೆ ಧನಲಕ್ಮೀ ಸಿ.ಬಂಗೇರ, ತಾ.ಪಂ.ಇ.ಒ ರಾಜಣ್ಣ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅದ್ಯಕ್ಷೆ ರೇವತಿ, ವಿಟ್ಲ ಸಿಡಿಪಿಒ ಸುಧಾಜೋಶಿ ಉಪಸ್ಥಿತರಿದ್ದರು.

ಬಂಟ್ವಾಳ ಸಿಡಿಪಿಒ ಮಲ್ಲಿಕಾ ಸ್ವಾಗತಿಸಿ , ಮೇಲ್ವಿಚಾರಕಿ ಭಾರತಿ ವಂದಿಸಿದರು. ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಕಾರ್ಯಕ್ರಮ ನಿರೂಪಿಸಿದರು.