ಉಡುಪಿ: ಕಾಡಿನಲ್ಲಿ ಆಹಾರ ಸಿಗದೆ ಅದೆಷ್ಟೋ ವನ್ಯಜೀವಿಗಳು ನಾಡಿಗೆ ಬರುತ್ತಿದೆ. ಹಾಗೇ ಅಪರೂಪದ ಅತಿಥಿಯೊಂದು ಉಡುಪಿಯ ಕುಕ್ಕಿಕಟ್ಟೆಯಲ್ಲಿ ಕಂಡು ಬಂತು. ಭೀಮ ಗಾತ್ರದ ಪಿಂಕ್ ಪೈಥಾನ್ ಆಹಾರ ಹುಡುಕಿಕೊಂಡು ಕಾಡಿನಿಂದ ನಗರಕ್ಕೆ ಬಂದಿದೆ.
ಸುಮಾರು ಏಳು ಅಡಿ ಉದ್ದದ 30ಕೆಜಿ ತೂಕದ ಹೆಬ್ಬಾವು, ಶ್ರೀಕಾಂತ್ ಉಪಾಧ್ಯಾಯ ಅವರ ಮನೆಯ ಆವರಣದಲ್ಲಿ ಕಾಣಿಸಿಕೊಂಡಿದೆ. ಅಪರೂಪಕ್ಕೆ ಕಾಣಸಿಗುವ ಈ ಹೆಬ್ಬಾವು ನೋಡುವುದಕ್ಕೆ ನೂರಾರು ಜನ ಸೇರಿದ್ದರು.
ಬೃಹತ್ಗಾತ್ರದ ಹೆಬ್ಬಾವಿನೊಂದಿಗೆ ಸ್ಪೆಲ್ಫಿ ಕ್ಲಿಕಿಸುವುದಕ್ಕೆ ಸ್ಥಳೀಯರು ಮುಗಿಬಿದ್ದರು. ಕೆಲವರು ಹೆಬ್ಬಾವಿನ ಜೊತೆ ಸೆಲ್ಫಿ ತೆಗದ್ರೆ, ಹಲವರು ಹಾವನ್ನು ಮುಟ್ಟಿ ಖುಷಿಪಟ್ರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ರಕ್ಷಿತ ಅರಣ್ಯಕ್ಕೆ ಸುರಕ್ಷಿತವಾಗಿ ಹೆಬ್ಬಾವನ್ನು ರವಾನಿಸಿದ್ದಾರೆ.