
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪರಿಶಿಷ್ಠ ಜಾತಿ ಕಾಲನಿಗಳ ಅಭಿವೃದ್ದಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಶಿಫಾರಸ್ಸಿನಂತೆ ಕರ್ನಾಟಕ ಸರಕಾರದಿಂದ ರೂ ೫೦ ಲಕ್ಷ ಮಂಜೂರಾಗಿದೆ.
ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಕೊಳ್ಳುಚಾಲು ನಾಗನ ಕೋಡಿ ರಸ್ತೆ ಕಾಂಕ್ರಿಟೀಕರಣ ೧೦ ಲಕ್ಷ, ಅರಿಯಡ್ಕ ಮಾಡ್ನೂರು ಗ್ರಾಮದ ಕೋಟೆಗುಡ್ಡೆ-ಮುಟ್ಟೇಲು ಪ ಜಾತಿ ಕಾಲನಿ ತೆರಳುವ ರಸ್ತೆ ೧೦ ಲಕ್ಷ, ಉಪ್ಪಿನಂಗಡಿ ಗ್ರಾಮದ ಹಿರ್ತಡ್ಕ ಕಾಲನಿ ರಸ್ತೆ ೧೦ ಲಕ್ಷ, ಕೋಡಿಂಬಾಡಿ ಗ್ರಾಮದ ನೆಕ್ಕರಾಜೆ-ಕೃಷ್ಣಗಿರಿಪ ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣ ೧೦ ಲಕ್ಷ ,ಶಾಂತಿಗೋಡು ಗ್ರಾಮದ ಆನಾಜೆ ಕೊಂಬತ್ತರಮುಲೆ ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ ೧೦ ಲಕ್ಷ ಬಿಡುಗಡೆಯಾಗಿದೆ.
ಪರಿಶಿಷ್ಠ ಜಾತಿ ಕಾಲನಿಯ ರಸ್ತೆಗಳ ಅಭಿವೃದ್ದಿಗೆ ಈ ಹಿಂದೆಯೂ ಅನುದಾನ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದೆ.
ಬಾಕ್ಸ್
ಪುತ್ತೂರು ವಿಧಾನಸಭಾ ಕ್ಷೇತ್ರದ ೫ ಕಾಲನಿಗೆ ತಲಾ ೧೦ ಲಕ್ಷ ಅನುದಾನ ಬಿಡುಗಡೆಯಾಗಿದೆ. ದಲಿತ ಕಾಲನಿಗಳ ಅಭಿವೃದ್ದಿಗೆ ಕರ್ನಾಟಕ ಸರಕಾರ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ದಲಿತರ ಪರ ಇರುವ ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ದಲಿತರ ಪರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಕಳೆದ ಕೆಲದಿನಗಳ ಹಿಂದೆ ಸುಮಾರು ೫೮ ಮಂದಿಗೆ ೭೫ ಲಕ್ಷ ರೂ ಅನುದಾನದಲ್ಲಿ ಕೊಳವೆ ಬಾವಿ ಮಂಜೂರು ಮಾಡಿತ್ತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ದೊರೆಯಲಿದೆ.